ಹೀರೋ ಮತ್ತು ಹೀರೋಯಿನ್ ಒಟ್ಟೊಟ್ಟಿಗೇ ಮೂರು ಸಿನಿಮಾ ಮಾಡಿದರೆ ಸಹಜವಾಗಿಯೇ ಅಂಥಾದ್ದೊಂದು ರೂಮರ್ ಸೃಷ್ಟಿಯಾಗಿಬಿಡುತ್ತದೆ. ಜೊತೆಗೆ ಅವರಿಬ್ಬರೂ ಬ್ಯಾಚುಲರ್ ಆಗಿದ್ದರೆ ಮುಗಿದೇ ಹೋಯ್ತು. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಆಗಿರುವುದೂ ಕೂಡಾ ಅದೇ. ಇತ್ತೀಚೆಗೆ ಹೊಯ್ಸಳ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್ ಡಾಲಿ ಮತ್ತು ಅಮೃತಾರನ್ನು ಕಾಲೆಳೆದರು.
ನೀವು ಯಾಕೆ ಇವರೊಟ್ಟಿಗೆ ಜಾಸ್ತಿ ನಟಿಸ್ತೀರಿ..? ಬೇರೆ ಕಲಾವಿದರಿಗೂ ಡೇಟ್ಸ್ ಕೊಡಿ.. ಅವರ ಜೊತೆಗೆ ನಟಿಸಿ.. ಮೂರ್ ಮೂರು ಸಿನಿಮಾ ಇವರ ಜತೆಗೆ ಮಾಡಿದ್ರೆ, ಬೇರೆಯವರಿಗೆ ನೀವು ಸಿಗೋದು ಹೇಗೆ? ಅಮೃತಾ ಮೂರು ಸಿನಿಮಾ ಒಟ್ಟಿಗೆ ಮಾಡಿದ್ರೂ, ಅವರನ್ನು ವೇದಿಕೆ ಧನಂಜಯ ಹೊಗಳುತ್ತಿಲ್ಲ. ನಮ್ಮೊಟ್ಟಿಗೆ ಮಾಡಿದ್ರೆ, ನಾವು ಅರ್ಧ ಗಂಟೆ ಹೊಗಳುತ್ತಿದ್ವಿ…ಕಿಚ್ಚ ಸುದೀಪ್ ಈ ಮಾತು ಹೇಳುವುದಕ್ಕೆ ಕಾರಣವಿತ್ತು. ವೇದಿಕೆಯಲ್ಲಿದ್ದ ಎಲ್ಲರ ಬಗ್ಗೆ ಮಾತನಾಡಿದ ಡಾಲಿ, ಅಮೃತಾರನ್ನು ಇವರು ಚಿತ್ರದ ಹೀರೋಯಿನ್ ಎಂದು ಹೇಳಿ ಮಾತು ಮುಗಿಸಿದ್ದರು.
ಸುದೀಪ್ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರ ಪಾಪ್ಕಾರ್ನ್ ಮಂಕಿ ಟೈಗರ್' ನೋಡಿ 'ಬಡವ ರಾಸ್ಕಲ್' ಸಿನಿಮಾಗೆ ನಿರ್ದೇಶಕ ಶಂಕರ್ ಗುರು ಮತ್ತೊಮ್ಮೆ ಜೋಡಿ ಮಾಡಿದ್ರು. ಬಡವ ರಾಸ್ಕಲ್ ಸಿನಿಮಾ ಹಿಟ್ ಆಯ್ತು ಅಂತ ನಮ್ಮ ಯೋಗಿ ಜಿ. ರಾಜ್, ಕಾರ್ತಿಕ್, ನಿರ್ದೇಶಕ ವಿಜಯ್ ಅವರು ಮತ್ತೆ ಅದೇ ಜೋಡಿಯನ್ನು ಕಂಟಿನ್ಯೂ ಮಾಡಿದರು.. ಎಂದು ಹೇಳಿದರು.
ವಾಸ್ತವವಾಗಿ ಈ ಗುಲ್ಲು ಹಬ್ಬೋಕೆ ಕಾರಣವಾಗಿದ್ದು ಗಣೇಶ್ ನಡೆಸಿಕೊಡುತ್ತಿದ್ದ ಟಿವಿ ಶೋವೊಂದರಲ್ಲಿ ಅಮೃತಾ ಅವರು ಡಾಲಿಗೆ ಪ್ರಪೋಸ್ ಮಾಡಿದ್ದು. ಟಿವಿ ಶೋನಲ್ಲಿ ತಮಾಷೆಗಾಗಿ ಮಾಡಿದ ವಿಡಿಯೋವನ್ನು ಜನ ಮರೆಯಲೇ ಇಲ್ಲ. ಒಟ್ಟಿಗೇ ಸಿನಿಮಾ ಮಾಡುತ್ತಿರೋ ಕಾರಣ, ಸಹಜವಾಗಿಯೇ ಹೊರಗಡೆಯೂ ಸಿಗುವ ಜೋಡಿ ಮಧ್ಯೆ ಏನೋ ಇದೆ. ಏನೇನೋ ಇದೆ.. ಎಂಬ ಗಾಸಿಪ್ ಹಬ್ಬುತ್ತದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್ ಅಷ್ಟೇ ಎನ್ನುವ ಡಾಲಿ ಮತ್ತು ಅಮೃತಾ.. ಸ್ನೇಹವನ್ನು ಮಾತ್ರ ಕಾಯ್ದುಕೊಂಡೇ ಬಂದಿದ್ದಾರೆ.
ಇದೆಲ್ಲದರ ಮಧ್ಯೆ ಹೊಯ್ಸಳ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ.