ಕೆಟಿವಿಎ ಎಂದರೆ ಕರ್ನಾಟಕ ಕಿರುತೆರೆಯ ಕಲಾವಿದರು, ತಂತ್ರಜ್ಞರು ಎಲ್ಲರೂ ಇರುವ ಸಂಸ್ಥೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್. ಇತ್ತೀಚೆಗೆ ಈ ಸಂಸ್ಥೆಗೆ ಚುನಾವಣೆ ನಡೆದಿದ್ದು, ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಆರ್ ಗರಣಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ನಟ ನಿರೂಪಕ
ಸೃಜನ್ ಲೋಕೇಶ್ ಕಾರ್ಯದರ್ಶಿ, ನಿರ್ಮಾಪಕ ಭಾಸ್ಕರ್ ಎಸ್.ಎಸ್. ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಕಲಾವಿದರಾದ ಗಿರಿಜಾ ಲೋಕೇಶ್, ವೀಣಾ ಸುಂದರ್, ಗಣೇಶ್ ರಾವ್ ಕೆಸರ್ಕರ್, ಸುನೇತ್ರಾ ಪಂಡಿತ್, ರಾಮಸ್ವಾಮಿ ಗೌಡ ಎನ್.ಟಿ, ವಸಂತ್ ಕುಮಾರ್ ವಿ, ನಿರ್ಮಾಪಕಿ ಭಾವನಾ ಬೆಳಗೆರೆ, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರ ಕೇಶವಚಂದ್ರ, ಛಾಯಾಗ್ರಾಹಕರಾದ ಬೆಟ್ಟೇ ಗೌಡ ಕೆ.ಟಿ. ನಿರ್ಮಾಣ ನಿರ್ವಾಹಕ ಪರಯ್ಯ ಆರ್ ಮತ್ತು ಹರ್ಷ ವಿಶ್ವನಾಥ್, ಯೂನಿಟ್ ಮಾಲೀಕ ಸೆಲ್ವಂ, ಸಂಕಲನಕಾರ ಕೃಷ್ಣ ಅರಸ್ ಕೆ.ಸಿ, ಪ್ರಸಾಧನ ಕಲಾವಿದ ನಾಗರಾಜು ಪಿ. ಧ್ವನಿಗ್ರಾಹಕ ಕಲಾವಿದ ಸಾಗರ್ ಬಿ.ಕೆ, ಬೆಳಕು ಸಹಾಯಕರಾದ ಶ್ರೀನಿವಾಸ್ ಪಿ.ವಿ, ವಸ್ತ್ರವಿನ್ಯಾಸ ಮತ್ತು ಕಲಾವಿನ್ಯಾಸ ವೀರೇಂದ್ರ ಡಿ.ಸಿ , ವಾಹನ ಚಾಲಕರಾದ ತಿಮ್ಮರಾಜು, ನಿರ್ಮಾಣ ಸಹಾಯಕರಾದ ವೀರೇಂದ್ರ ಪಿಕೆ. ಈ ಬಾರಿ ಆಯ್ಕೆಯಾಗಿದ್ದಾರೆ.
ಈ ಸಂಘಟನೆಯ ಸ್ಥಾಪನೆಯ ಹಿಂದೆ ರವಿ ಆರ್.ಗರಣಿ ಶ್ರಮ ಹೆಚ್ಚು. ಈಗ ಅವರೇ ಸಂಘದ ಅಧ್ಯಕ್ಷರಾಗಿದ್ದಾರೆ. ಈಗ ಆಯ್ಕೆಯಾಗಿರುವ ಎಲ್ಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅಧಿಕಾರಾವಧಿ 3 ವರ್ಷ. ಅಂದ್ರೆ 2025ರವರೆಗೂ ಈ ಸದಸ್ಯರೇ ಇರುತ್ತಾರೆ.