ಮಾರ್ಚ್ 17. ಪುನೀತ್ ರಾಜಕುಮಾರ್ ಹುಟ್ಟುಹಬ್ಬ. ಪುನೀತ್ ಮೃತರಾಗಿಲ್ಲ, ಈಗಲೂ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಹೀಗಾಗಿಯೇ ಪುನೀತ್ ಹುಟ್ಟುಹಬ್ಬವೂ ಅಭಿಮಾನಿಗಳ ಸಂಭ್ರಮದ ಹಬ್ಬವಾಗುತ್ತಿದೆ.
ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದ್ದು, ಉಚಿತ ಪ್ರದರ್ಶನ ಇದೆ. ರಾತ್ರಿ 9.30ಕ್ಕೆ ಶೋ ಇದ್ದು, ಸಿನಿಮಾ ಮುಗಿದ ಮೇಲೆ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ.
ಮಾರ್ಚ್ 17ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.
ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.
ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್ಗೆ ಅರ್ಪಣೆ ಮಾಡ್ತಿದ್ದಾರೆ.
ಇನ್ನು ರಾಜ್ಯದ ಹಲವು ಕಡೆ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ, ಅಪ್ಪು, ಆಕಾಶ್ ಮೊದಲಾದ ಹಲವು ಚಿತ್ರಗಳು ವಿಶೇಷವಾಗಿ ಅಪ್ಪು ಅಭಿಮಾನಿಗಳಿಗಾಗಿ ಪ್ರದರ್ಶನಗೊಳ್ಳುತ್ತಿವೆ.