` ಹುಟ್ಟುಹಬ್ಬಕ್ಕೆ ಮುನ್ನ ಮೋದಿ ಆಶೀರ್ವಾದ ಪಡೆದ ಜಗ್ಗೇಶ್ ಕುಟುಂಬ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹುಟ್ಟುಹಬ್ಬಕ್ಕೆ ಮುನ್ನ ಮೋದಿ ಆಶೀರ್ವಾದ ಪಡೆದ ಜಗ್ಗೇಶ್ ಕುಟುಂಬ
PM Narendra Modi, Jaggesh Image

ಮಾರ್ಚ್ 17. ಪುನೀತ್ ರಾಜಕುಮಾರ್ ಅವರದ್ದಷ್ಟೇ ಅಲ್ಲ, ಜಗ್ಗೇಶ್ ಹುಟ್ಟುಹಬ್ಬವೂ ಹೌದು. ಹುಟ್ಟುಹಬ್ಬಕ್ಕೆ ಮುನ್ನವೇ ಜಗ್ಗೇಶ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಜಗ್ಗೇಶ್ ಜೊತೆ ಅವರ ಇಡೀ ಕುಟುಂಬ ಇತ್ತು ಎನ್ನುವುದು ವಿಶೇಷ. ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರ ಕುಟುಂಬದ ಜೊತೆ ಸಮಯ ಕಳೆದ ಮೋದಿ, ಕುಟುಂಬದವರನ್ನೆಲ್ಲ ಹರಸಿ ಹಾರೈಸಿದ್ದಾರೆ. ಈ ಹುಟ್ಟುಹಬ್ಬ ಜಗ್ಗೇಶ್ ಅವರ 60ನೇ ಹುಟ್ಟುಹಬ್ಬ ಎನ್ನುವುದು ವಿಶೇಷ.

ದೆಹಲಿಯ ಪಿಎಂ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ಜಗ್ಗೇಶ್, ಆ ಭೇಟಿಗೆ ವಿಶೇಷ ಅರ್ಥವೊಂದನ್ನೂ ನೀಡಿದ್ದಾರೆ. ‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಿರಿಯ ಪುತ್ರ ಯತಿರಾಜ್ , ಪತ್ನಿ ಪರಿಮಳಾ ಜೊತೆ ಪ್ರಧಾನಿಯನ್ನು ಭೇಟಿ ಮಾಡಿ, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ. ಪ್ರತೀ ವರ್ಷ ತಮ್ಮ ಹುಟ್ಟುಹಬ್ಬದ ದಿನ ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿರುವುದನ್ನು ಜಗ್ಗೇಶ್ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ರಾಯರ ದರ್ಶನದ ಜೊತೆಯಲ್ಲೇ 60ನೇ ಹುಟ್ಟುಹಬ್ಬ ಸಂಭ್ರಮ ನೆರವೇರಲಿದೆ.