ಕಬ್ಜ ಕ್ರೇಜ್ ಸಖತ್ತಾಗಿಯೇ ಇದೆ. ಮೂರ್ ಮೂರು ಸೂಪರ್ ಸ್ಟಾರ್‍ಗಳಿದ್ದ ಮೇಲೆ ಕ್ರೇಜ್ ಸೃಷ್ಟಿಯಾಗೋದು ಸಹಜ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಸೆಂಚುರಿ ಸ್ಟಾರ್ ಶಿವಣ್ಣ, ಈ ಮೂವರ ಜೊತೆ ಶ್ರೇಯಾ ಸರಣ್. ಜೊತೆಗೆ ಅದ್ಭುತ ಮೇಕಿಂಗ್.. ಟ್ರೆಂಡ್ ಸೃಷ್ಟಿಸೋ ಸಾಂಗುಗಳು.. ಇವೆಲ್ಲವೂ ಇದ್ದ ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗೆ ಸಿಕ್ಕಿದ್ದು ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳ ಅದ್ಭುತ ಪ್ರತಿಕ್ರಿಯೆ. ಕಬ್ಜ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರಾಕೇಶ್ ರೋಷನ್, ನಟ ಮನೋಜ್ ಬಾಜಪೇಯಿ, ನಟ ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ನಿರ್ದೇಶಕ ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ 'ಕಬ್ಜ' ಟ್ರೇಲರ್ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಕಬ್ಜ' ಚಿತ್ರವನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವುದಾಗಿ ತಾರೆಯರು ತಿಳಿಸಿದ್ದಾರೆ.
ಕಬ್ಜ ಸಿನಿಮಾ ಬಿಡುಗಡೆಗೂ ಮೊದಲೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಅಂದಾಜು ಪ್ರಕಾರ ಈಗಾಗಲೇ ಚಿತ್ರದ ಕಲೆಕ್ಷನ್ 100 ಕೋಟಿ ದಾಟಿ ಆಗಿದೆ. ಸಿನಿಮಾ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಆರ್. ಚಂದ್ರು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು 'ಕಬ್ಜ' ನಿರ್ಮಾಣದಲ್ಲಿ ಕೈ ಜೋಡಿಸಿವೆ. ತಮಿಳುನಾಡಿನಾದ್ಯಂತ 'ಕಬ್ಜ' ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತುಕೊಂಡಿದೆ.
ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವುದು ಕಲರ್ಸ್ ಕನ್ನಡ. ಹಿಂದಿ, ತಮಿಳು, ಮಲಯಾಳಂ, ತೆಲುಗು ರೈಟ್ಸ್‍ಗಳಿಗೂ ಸಖತ್ ಡಿಮ್ಯಾಂಡ ಇದೆ. ಈಗಾಗಲೇ ಸೇಲ್ ಆಗಿರುವ ಲೆಕ್ಕವನ್ನೇ ನೋಡೋದಾದ್ರೆ 65 ಕೋಟಿ ಕಲೆಕ್ಷನ್ ಆಗಿದೆ. ಇನ್ನೂ ಬರಬೇಕಿದೆ. ಬರಬೇಕಿರುವ ಲೆಕ್ಕವನ್ನೂ ಸೇರಿಸಿದರೆ 100 ಕೋಟಿಯ ಬಾರ್ಡರ್ ದಾಟಿ ಆಗಿದೆ. ಅಂದಹಾಗೆ ಈ ಲೆಕ್ಕದಲ್ಲಿ ಥಿಯೇಟರ್ ಶೇರ್ಸ್ ಲೆಕ್ಕಾಚಾರ ಇಲ್ಲ. ಈಗಾಗಲೇ ತಮಿಳು, ಹಿಂದಿಯ ಥಿಯೇಟರ್ ರೈಟ್ಸ್‍ನ್ನೂ ಮಾರಾಟ ಮಾಡಲಾಗಿದ್ದು, ಆ ಲೆಕ್ಕವನ್ನು ಇಲ್ಲಿ ಸೇರಿಸಿಲ್ಲ. ಕನ್ನಡದಲ್ಲಂತೂ ವಿತರಕರು ನಾ ಮುಂದು ತಾ ಮುಂದು ಎಂದು ಕಬ್ಜ ಖರೀದಿಗೆ ಮುಗಿಬಿದ್ದಿದ್ದಾರೆ.