ಕಬ್ಜ ಇನ್ನೇನು ರಿಲೀಸ್ ಆಗುತ್ತಿದೆ. ಅದು ತ್ರಿಮೂರ್ತಿಗಳ ಸಿನಿಮಾ. ಉಪೇಂದ್ರ, ಸುದೀಪ್ ಮತ್ತು ಶಿವಣ್ಣ ಮೂವರೂ ನಟಿಸಿರೋ ಚಿತ್ರದಲ್ಲಿ ಇನ್ನೂ ಒಬ್ಬ ನಾಯಕ ಇದ್ದಾರೆ. ಅನೂಪ್ ರೇವಣ್ಣ. 2016ರಲ್ಲಿ ಲಕ್ಷ್ಮಣ ಅನ್ನೋ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರೇವಣ್ಣ, ಮೊದಲ ಚಿತ್ರದಲ್ಲಿಯೇ ಭರವಸೆ ಹುಟ್ಟಿಸಿದ್ದರು. ಅದಾದ ಮೇಲೆ ನಾ ಪಂಟ ಕಣೋ.. ಅನ್ನೋ ಇನ್ನೊಂದು ಚಿತ್ರದಲ್ಲೂ ನಟಿಸಿದ್ದ ಅನೂಪ್ ರೇವಣ್ಣ ಇದೀಗ ಕಬ್ಜದಲ್ಲೂ ನಟಿಸಿದ್ದಾರೆ. ಅಂದಹಾಗೆ ಅನೂಪ್ ರೇವಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಸ್ವತಃ ಆರ್.ಚಂದ್ರು ಅನ್ನೋದು ಇನ್ನೊಂದು ವಿಶೇಷ.
ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರ. ಮಾತು ಕಡಿಮೆ. ಆಕ್ಷನ್ ಜಾಸ್ತಿ. ಕೈ ಮುಂದು ಮಾಡುವುದೇ ನನ್ನ ಕೆಲಸ. ನನ್ನ ಪಾತ್ರದ ಹೆಸರು ಟಾರ್ಗೆಟ್. ಉಪ್ಪಿ ಪಾತ್ರಕ್ಕೆ ಬಲಗೈ ಬಂಟನಂತಿರುವ ಪಾತ್ರ ನನ್ನದು.. ಎಂದು ಹೇಳ್ತಾರೆ ಅನೂಪ್ ರೇವಣ್ಣ. ಉಳಿದಂತೆ ಚಿತ್ರ ಮತ್ತು ಪಾತ್ರದ ಬಗ್ಗೆ ಏನು ಹೇಳಬೇಕೆಂದರೂ ನೀವು ಚಂದ್ರು ಸರ್ ಅವರನ್ನೇ ಕೇಳಬೇಕು ಅನ್ನೋ ಅನೂಪ್ ರೇವಣ್ಣ ಕಬ್ಜ ಚಿತ್ರದ ಖುಷಿಯಾಗಿದ್ದಾರೆ. ಕಬ್ಜ, ಚಂದ್ರು ಅವರ ದೊಡ್ಡ ಕನಸು. ಅದ್ಭುತವಾಗಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿಯೇ ಅದನ್ನು ನೋಡುತ್ತೀರಿ. ನಾನೂ ಪ್ರೇಕ್ಷಕರ ಜೊತೆ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಎನ್ನುವುದು ಅನೂಪ್ ರೇವಣ್ಣ ಅವರ ಮಾತು.