ರಜನಿಕಾಂತ್ ಅವರಿಗೀತ 72 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ರಜನಿ ಅವರಿಗೆ ಸರಿಸಾಟಿಯಾಗುವ ಇನ್ನೊಬ್ಬ ಸ್ಟಾರ್ ಇಡೀ ಭಾರತೀಯ ಚಿತ್ರರಂಗದಲ್ಲಿ ಇಲ್ಲ. ಇನ್ನು ಅವರ ಅಣ್ಣನಿಗೆ ಎಷ್ಟು ವರ್ಷ ವಯಸ್ಸಿರಬಹುದು? ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ಗಾಯಕ್‍ವಾಡ್. ಬೆಂಗಳೂರಿನಲ್ಲೇ ಇದ್ದಾರೆ. ಅವರಿಗೀಗ 80 ವರ್ಷ. ಸತ್ಯನಾರಾಯಣ್ ಅವರ 80ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ ಅವರ ಕುಟುಂಬ.
ಇವತ್ತು ನಾನು ಏನಾಗಿದ್ದೇನೆಯೋ.. ಅದಕ್ಕೆ ಅವನು ಕಾರಣ. ಬಂಗಾರದ ಮನುಷ್ಯನಿಗೆ ಬಂಗಾರದ ಮಳೆಯ ಅಭಿಷೇಕ ಎಂದು ಬರೆದುಕೊಂಡಿದ್ದಾರೆ ರಜನಿಕಾಂತ್. ಅಣ್ಣನ 80ನೇ ಹುಟ್ಟುಹಬ್ಬಕ್ಕೆ ರಜನಿಕಾಂತ್ ತಮ್ಮ ಪತ್ನಿ ಜೊತೆ ಬಂದಿದ್ದರು. ಇಡೀ ಕಾರ್ಯಕ್ರಮದಲ್ಲಿ ಜೊತೆಯಲ್ಲಿಯೇ ಇದ್ದ ರಜನಿ, ಅಣ್ಣನ ಮೇಲೆ ಚಿನ್ನದ ನಾಣ್ಯಗಳ ಅಭಿಷೇಕ ಮಾಡಿದರು.