` ಫಿಲಂ ಚೇಂಬರ್ ನಲ್ಲಿ ಸಾ.ರಾ.ಗೋವಿಂದು ಹೆಸರು ಕೈ ಬಿಟ್ಟಿರೋದು ಯಾಕೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫಿಲಂ ಚೇಂಬರ್ ನಲ್ಲಿ ಸಾ.ರಾ.ಗೋವಿಂದು ಹೆಸರು ಕೈ ಬಿಟ್ಟಿರೋದು ಯಾಕೆ?
KFCC, Sa Ra Govindu Image

ಸಾ.ರಾ.ಗೋವಿಂದು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. 2015ರಿಂದ 2018ರವರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದರು. ಕೇವಲ ನಿರ್ಮಾಪಕರಷ್ಟೇ ಅಲ್ಲ, ಚಲನಚಿತ್ರರಂಗದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವುದು ಇವರು ಮೂಲಕವೇ ಎನ್ನುವುದೂ ಮುಖ್ಯ. ಸೀಮಿತ ಸಂಖ್ಯೆಯಲ್ಲಷ್ಟೇ ಚಲನಚಿತ್ರಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಹೆಚ್ಚಿಸಿದ್ದು ಇವರ ಕಾಲದಲ್ಲೇ. ಅಧ್ಯಕ್ಷರು ಬೇರೆಯವರಿದ್ದರೂ ಚಿತ್ರರಂಗದ ಸಮಸ್ಯೆ ಎಂದ ಕೂಡಲೇ ಓಡೋಡಿ ಬರುತ್ತಿದ್ದ ಸಾ.ರಾ.ಗೋವಿಂದು ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಹೆಸರನ್ನ ಕೈ ಬಿಟ್ಟಿದ್ದು ಯಾಕೆ ಎಂದು ಮೂಲಗಳು ಕೇಳುತ್ತಿದೆ.

ಸಾ.ರಾ.ಗೋವಿಂದು ಚೇಂಬರ್ ನಲ್ಲಿ ಕಲ್ಯಾಣ ನಿಧಿ ಎಂಬ ಪರಿಹಾರ ನಿಧಿಯನ್ನು ಸ್ಥಾಪನೆ ಮಾಡಿದ್ದರು. ಈ ಕಲ್ಯಾಣ ನಿಧಿಯ ಮೂಲಕ ಚೇಂಬರ್`ನ ಯಾರಾದರೂ ಸದಸ್ಯರು ಅನಾರೋಗ್ಯಕ್ಕೀಡಾದರೆ ಅವರಿಗೆ ಎರಡೂವರೆ ಲಕ್ಷ ರೂ.ವರೆಗೆ ಆರೋಗ್ಯ ಸೌಲಭ್ಯ ಒದಗಿಸುವ ವ್ಯವಸ್ಥೆ ಜಾರಿಗೆ ತಂದಿದ್ದರು. ಈ ಪರಿಕಲ್ಪನೆಗೆ ಕಾರಣರಾಗಿದ್ದವರು ಸಾ.ರಾ.ಗೋವಿಂದು ಹಾಗೂ ಎಂ.ಎನ್. ಕುಮಾರ್. ಗೋವಿಂದು ಅವರೇ ಈ ಸಮಿತಿದೆ ಅಜೀವ ಅಧ್ಯಕ್ಷರು ಎಂದು ಫಿಲಂ ಚೇಂಬರ್ ನ ಮಹಾ ಸಭೆಯಲ್ಲೇ ತೀರ್ಮಾನವಾಗಿದೆ. ಇತ್ತೀಚೆಗೆ 23/7/2022 ರಂದು ನಡೆದ ಕಾರ್ಯರಾರಿ ಸಮಿತಿಯಲಿ ಎ.ಗಣೇಶ್, ಕೆ.ವಿ.ಚಂದ್ರಶೇಖರ್ ಸೇರಿದಂತೆ ಚೇಂಬರ್ ಸದಸ್ಯರ ಒಮ್ಮತದ ತೀರ್ಮಾನದ ಮೇರೆಗೆ, ಕಲ್ಯಾಣ ನಿಧಿಗೆ ಸಾ.ರಾ.ಗೋವಿಂದು ಅವರು ಮುಂದಾಳತ್ವದಲ್ಲೇ ಸಭೆ ಮಾಡುವುದು ಎಂದು ತೀರ್ಮಾನ ಮಾಡಿದ್ದರು. ಅಲ್ಲಿಯೇ ಈಗ ಅವಮಾನವಾಗುತ್ತಿರುವುದು. ಸಂಕಷ್ಟದ ಸಮಯದಲ್ಲಿ ಚೇಂಬರ್ ಮೂಲಕವೇ ನೆರವಾಗಬೇಕು. ಚೇಂಬರ್`ನ ಸದಸ್ಯರು ಅವಮಾನ, ಮುಜುಗರ ಅನುಭವಿಸಬಾರದು ಎಂಬ ಉದ್ದೇಶದಿಂದ ಜಾರಿಗೆ ತಂದ ಯೋಜನೆಯಲ್ಲಿಯೇ ಸಾ.ರಾ.ಗೋವಿಂದು ಅವರ ಹೆಸರಿಗೆ ಕಪ್ಪು ಬಣ್ಣ ಬಳಿಯುವ ತಂತ್ರ ನಡೆದಿದೆ.ಜೊತೆಗೆ ಇವರನ್ನ ಕಾರ್ಯಕಾರಿ ಸಮಿತಿಗೂ ಕರೆಯಬಾರದೆಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿದೆ.

ಇತ್ತೀಚೆಗೆ ನಡೆದ ಚೇಂಬರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಸಾರಾ ಗೋವಿಂದು ಮತ್ತು ಇತರರು ಕೋರ್ಟ್ ಮೆಟ್ಟಿಲೇರಿದರು. ಇದೆಲ್ಲದರ ನಡುವೆ ಕಲ್ಯಾಣ ನಿಧಿ ಸಭೆ ಸಾ ರಾ ಗೋವಿಂದು ಅವರ ಅಧ್ಯಕ್ಷತೆಯಲ್ಲೇ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಕಲ್ಯಾಣ ನಿಧಿ ಸಭೆಯಲ್ಲಿ ಕೆಲವರಿಗೆ ಒಂದು ಅಚ್ಚರಿ ಕಾದಿತ್ತು. ಸಭೆಯ ಸದಸ್ಯರ ಪಟ್ಟಿಯಲ್ಲಿ ಸಾ.ರಾ.ಗೋವಿಂದು ಅವರ ಹೆಸರನ್ನು ಬ್ಲಾಕ್ ಮಾರ್ಕಿನಲ್ಲಿ ಮುಚ್ಚಲಾಗಿತ್ತು ಎಂದು ಮೂಲಗಳು ತಿಳಿಸಿದೆ.

ಅರೆ, ಸಭೆಯ ಸದಸ್ಯರ ಹೆಸರನ್ನು ಮರೆಮಾಚಿ ಸಾಧಿಸುವುದೇನು? ಅವರ ಹೆಸರಿಗೆ ಕಪ್ಪು ಪಟ್ಟಿ ಬಳಿಯುವ ಮೂಲಕ ಚೇಂಬರ್`ಗೆ ಕಪ್ಪು ಬಣ್ಣ ಬಳೆಯುತ್ತಿದ್ದಾರಲ್ಲಾ? ಇದು ಈ ಕಪ್ಪುಪಟ್ಟಿ ಬಳಿದು ಸಾ.ರಾ.ಗೋವಿಂದು ಹೆಸರನ್ನು ಮುಚ್ಚಿರುವವರಿಗೆ ಕೇಳುತ್ತಿರುವ ಪ್ರಶ್ನೆ.

ವಿವಾದವೇ ಬೇರೆ.. ಚೇಂಬರ್`ನ ಘನತೆಯೇ ಬೇರೆ. ಯಾರದ್ದೋ ವೈಯಕ್ತಿಕ ರಾಗದ್ವೇಷಗಳಿಗೆ ಚೇಂಬರ್ ಇಲ್ಲ. ಇರಲೂಬಾರದು. ಸಾ.ರಾ.ಗೋವಿಂದು ಅವರಷ್ಟೇ ಅಲ್ಲ, ಈ ಹಿಂದೆ ಅಧ್ಯಕ್ಷರಾಗಿದ್ದ ಯಾರೊಬ್ಬರೂ ಕೂಡಾ ಈ ರೀತಿ ನಡೆದುಕೊಂಡಿರಲಿಲ್ಲ. ಆದರೆ ಈ ಬಾರಿ ....