ಸ್ಯಾಂಡಲ್`ವುಡ್ ಡಿಂಪಲ್ ಕ್ವೀನ್ ರಚಿತಾ ರಾವ್ ಅವರಿಗೀಗ 30 ವರ್ಷ. ಆಗಲೇ ರಚಿತಾ ಅವರಿಗೆ ಮದುವೆ ಯಾವಾಗ ಅನ್ನೋ ಪ್ರಶ್ನೆಗಳು ದಿನೇ ದಿನೇ ಎದುರಾಗುತ್ತಿವೆ. ಪ್ರಶ್ನೆ ಕೇಳುವವರಿಗಿಂತ ಬೋಲ್ಡ್ ಆಗಿರುವ ರಚಿತಾ, ಪ್ರತಿಪ್ರಶ್ನೆಗಳಿಗೆ ಪ್ರಶ್ನೆ ಕೇಳುವವರೇ ಸುಮ್ಮನಾಗುತ್ತಿದ್ದಾರೆ. ಇಂತಹ ರಚಿತಾ ರಾಮ್ ಅವರೀಗ ಡೇಟಿಂಗ್ ಆಪ್ ಒಂದಕ್ಕೆ ರಾಯಭಾರಿ ಆಗಿದ್ದಾರೆ.
ಇಷ್ಟಕ್ಕೂ ರಚಿತಾ ರಾಮ್ ಅವರಿಗೆ ಡೇಟಿಂಗ್ ಯಾಕೆ? ಹುಡುಗರನ್ನ ಹುಡುಕೋಕೆ ಅವರೇಕೆ ಕಷ್ಟ ಪಡಬೇಕು.. ಅನ್ನೋವ್ರಿಗೆ ಕೊರತೆಯೇನೂ ಇರಲ್ಲ. ಹುಡುಗ ಬೇಕು ಅಂತ ಹೇಳಿದ್ರೆ ಸಾಕು, ಕ್ಯೂ ನಿಲ್ತಾರೆ ಅನ್ನೋವ್ರಿಗೇನೂ ಕೊರತೆ ಇಲ್ಲ. ಇಷ್ಟಕ್ಕೂ ರಚಿತಾ ಅವರು ಮಾಡಿರೋದು ಇಷ್ಟೆ, ಒಂದು ಡೇಟಿಂಗ್ ಆಪ್`ನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀನೇಯೆಟ್.ಗೋ ಅನ್ನೋ ಆಪ್ ಅದು, ಇದು ಡೇಟಿಂಗ್ ಆಪ್ ಅಲ್ಲ. ಸಿಂಗಲ್ ಇರೋವ್ರಿಗೆ ಎಂದೇ ರೂಪಿಸಿರುವ ಆಪ್. ನಿಜವಾದ ಪ್ರೀತಿ ಹುಡುಕುವರಿಗಾಗಿ.. ಎಂದು ಹೇಳಿದ್ದಾರೆ ರಚಿತಾ ರಾಮ್. ನಿಜವಾದ ಪ್ರೀತಿ ಹುಡುಕುವವರು ಆಪ್ ನೋಡೋಕೆ ಯಾಕೆ ಹೋಗ್ತಾರೆ ಅನ್ನೋದು ಪ್ರಶ್ನೆ. ಆದರೆ ರಚಿತಾ ರಾಮ್ ಡೇಟಿಂಗ್ ಆಪ್ ಪ್ರಮೋಷನ್ ಮಾಡಿರುವುದು ಹಲವರ ಹುಬ್ಬೇರಿಸಿರುವುದಂತೂ ನಿಜ.