ನಟಿ ಅಭಿನಯ ಅವರ ಮೇಲೆ ಇತ್ತೀಚೆಗೆ ತಾನೆ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಬಂಧನ ಭೀತಿ ಎದುರಾಗಿತ್ತು. ಇದೀಗ ಅಭಿನಯ ಹಾಗೂ ಅವರ ತಾಯಿ, ಅಣ್ಣನಿಗೆ ಜಾಮೀನು ಸಿಕ್ಕಿದೆ. ಈ ಮೂಲಕ ಅಭಿನಯ ಕುಟುಂಬಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ
ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ, ತಲೆಮರೆಸಿಕೊಂಡ ಆರೋಪದಡಿ ಅಭಿನಯಾ, ತಾಯಿ ಜಯಮ್ಮ ಹಾಗೂ ಅವರ ಸಹೋದರ ಚೆಲುವರಾಜು ವಿರುದ್ಧ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅಭಿನಯಾ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನ ಪೀಠ, ಜಾಮೀನು ಮಂಜೂರು ಮಾಡಿದೆ. ಮುಂದಿನ 10 ದಿನಗಳ ಮಟ್ಟಿಗೆ ಅವರನ್ನು ಬಂಧಿಸದಂತೆ ಸೂಚನೆ ನೀಡಿದೆ. ಜೊತೆಗೆ, ಬೆಂಗಳೂರು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ.
ಫೆಬ್ರವರಿ 20ನೇ ತಾರೀಕು ವಿಚಾರಣೆ ನಡೆಯಲಿದ್ದು, ಅಂದಿನ ವಿಚಾರಣೆ ಅಭಿನಯ ಅವರ ಪಾಲಿಗೆ ನಿರ್ಣಾಯಕವಾಗಲಿದೆ. ಸದ್ಯಕ್ಕೆ 10 ದಿನದ ರಿಲೀಫ್ ಸಿಕ್ಕಿದೆ.
Related Articles :-
ಚಿತ್ರನಟಿ ಅಭಿನಯ ವಿರುದ್ಧ ಲುಕ್ ಔಟ್ ನೋಟಿಸ್
ಅನುಭವ ಅಭಿನಯಗೆ ಜೈಲು : ಏನಿದು ವೇಶ್ಯಾವಾಟಿಕೆ, ವರದಕ್ಷಿಣೆ ಕಿರುಕುಳ ಆರೋಪ?