ಡಾ. ಪುನೀತ್ ರಾಜ್ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅಪ್ಪು ಅವರನ್ನು ನಮ್ಮ ನಡುವೆ ಸದಾ ಜೀವಂತವಾಗಿಟ್ಟಿರುವುದಕ್ಕೆ ಅಭಿಮಾನಿಗಳಿಗೆ, ರಾಜ್ಯ ಸರ್ಕಾರಕ್ಕೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚಿತ್ರರಂಗದ ಬಂಧುಗಳಿಗೆ ನಾನು ಎಂದೆಂದಿಗೂ ಚಿರಋಣಿ.
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ಹೊರ ವರ್ತುಲ ರಸ್ತೆಯನ್ನು ಅಪ್ಪು ಗೌರವಾರ್ಥ ಡಾ. ಪುನೀತ್ ರಾಜ್ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
ಡಾ.ರಾಜ್ ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಧನ್ಯವಾದ ಅರ್ಪಿಸಿದ್ದು ಹೀಗೆ. ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯ ಹೆಸರನ್ನು ಲೋಕಾರ್ಪಣೆ ಮಾಡಿ ಅಪ್ಪು ಸತ್ತ ನಂತರವೂ ನಮ್ಮ ಜೊತೆಗೆ ಇದ್ದಾರೆ. ಅಪ್ಪು ಹೆಸರಿನಲ್ಲಿ ಸಮಾಧಿಯಲ್ಲಿ ಅದ್ಭುತ ಸ್ಮಾರಕವನ್ನು ಮಾಡುತ್ತೇವೆ. ಈ ಭಾಗ್ಯ ನನ್ನದು. ಅಷ್ಟೇ ಅಲ್ಲ ಕರ್ನಾಟಕ ರತ್ನ ಕೊಡುವ ಭಾಗ್ಯವೂ ನನ್ನದಾಗಿತ್ತು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕಿರುವವನು ಸಾಧಕ. ಬೀದರ್ನ ಔರಾದ, ಚಾಮರಾಜನಗರ, ನಿಪ್ಪಾಣಿ ಎಲ್ಲ ಕಡೆ ಅಪ್ಪು ಬಗ್ಗೆ ಅದೇ ಪ್ರೀತಿ ಗಳಿಸಿದ್ದಾರೆ. ಕೋಟಿ ಹೃದಯಗಳಲ್ಲಿ ಅಪ್ಪು ಜೀವಂತವಿದ್ದಾರೆ ಎಂದರು. ಪುನೀತ್ ನಮ್ಮ ನಿಮ್ಮೆಲ್ಲರ ಅಪ್ಪು, ಅವನು ನನ್ನ ಅಪ್ಪು. ರಾಜಕುಮಾರ್ ಕುಟುಂಬದೊಂದಿಗೆ ಸುಮಾರು ನಾಲ್ಕು ದಶಕದ ಒಡನಾಟ, ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಲ್ಲಿ ಅಪ್ಪು ಒಬ್ಬರು ಎಂದು ಸ್ಮರಿಸಿದರು.
ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಇದನ್ನು ಸಂಭ್ರಮಿಸಬೇಕೋ.. ಬೇಡವೋ ತಿಳಿಯದಾಗಿದೆ. ಅಪ್ಪಾಜಿಗೂ 46ರಲ್ಲಿ ಡಾಕ್ಟರೇಟ್ ಬಂದಿತ್ತು. ಪುನೀತ್ ಗೂ 46ಏ ವಯಸ್ಸಿನಲ್ಲಿ ಬಂದಿದೆ. ಅಪ್ಪು ಪವರ್‍ನ್ನ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋದ. ನಾನೂ ಇನ್ನು ಮುಂದೆ ಅಪ್ಪು ಆಗಿಯೇ ಬದುಕುತ್ತೇನೆ. ಎಲ್ಲರೂ ಸೇರಿ ಒಂದು ಸುಂದರ ರಾಜ್ಯ ಕಟ್ಟೋಣ ಎಂದು ಭಾವುಕರಾದರು ರಾಘಣ್ಣ.
ಬಾನದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಅಭಿಷೇಕ್ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.