'ನಾವು ಎಲ್ಲಿಯೋ ಹೋಗಿ ಹೇಗೋ ಶೂಟ್ ಮಾಡಿಬಿಟ್ಟರೆ ಹಾಗೆಯೇ ಬರಲು ಸಾಧ್ಯವಿಲ್ಲ. ಅದೇ ಲುಕ್ ಸಿಗೋದು ಸುಲಭವಲ್ಲ. ನೀವು ಕಬ್ಜ ಟ್ರೇಲರ್ ನೋಡಿ ಖುಷಿ ಪಟ್ಟಿರಬಹುದು. ಅದರ ಹಿಂದಿನ ಶ್ರಮ ನಮಗಷ್ಟೇ ಗೊತ್ತು. ಅಂತ ಸಿನಿಮಾ ಮಾಡಲು ನಿರ್ದೇಶಕನಿಗೆ ತಾಕತ್ ಬೇಕು, ಒಂದು ಒಳ್ಳೆಯ ಟೀಂ ಬೇಕು. ಅದೆಲ್ಲದರ ಜೊತೆಗೆ ಬಹಳ ದೊಡ್ಡ ಬಜೆಟ್ ಬೇಕು. ಇದೇ ಕಾರಣಕ್ಕೆ ನಾನು 'ಕೆಜಿಎಫ್' ತಂಡಕ್ಕೆ ನಾನು ಹ್ಯಾಟ್ಸ್ ಆಫ್ ಹೇಳುತ್ತೇನೆ. ನನಗೆ 'ಕಬ್ಜ' ಸಿನಿಮಾ ಮಾಡಲು 'ಕೆಜಿಎಫ್' ಸಿನಿಮಾವೇ ಸ್ಪೂರ್ತಿ ,ಈ ಮಾತು ಹೇಳಿದ್ದು ಆರ್.ಚಂದ್ರು.
ಆರ್.ಚಂದ್ರು ಚಿತ್ರರಂಗಕ್ಕೆ ಹೊಸಬರೇನಲ್ಲ. ತಾಜ್ ಮಹಲ್ ಚಿತ್ರದಿಂದ ಡೈರೆಕ್ಟರ್ ಆದ ಚಂದ್ರು, ಮೈಲಾರಿ, ಚಾರ್`ಮಿನಾರ್, ಕನಕ, ಐ ಲವ್ ಯು.. ದಂತಹ ಹಿಟ್ ಚಿತ್ರಗಳನ್ನು ಕೊಟ್ಟವರು. ಶಿವಣ್ಣ, ಉಪೇಂದ್ರ, ಪ್ರೇಮ್, ದುನಿಯಾ ವಿಜಯ್, ಪ್ರಿಯಾಮಣಿ.. ಯಂತಹ ಕಲಾವಿದರೊಂದಿಗೆ ಕೆಲಸ ಮಾಡಿದವರು. ಇಂತಹ ಒಬ್ಬ ಡೈರೆಕ್ಟರ್ ಇನ್ನೊಂದು ಚಿತ್ರ ನನಗೆ ಸ್ಫೂರ್ತಿ ಎನ್ನುವುದಿದೆಯಲ್ಲ... ಆ ಮಾತು ಹೇಳುವುದಕ್ಕೆ ಗಟ್ಸ್ ಬೇಕು. ಕೆಜಿಎಫ್ ಸ್ಫೂರ್ತಿ ಎನ್ನುವುದು ನಿಜ. ಚಿತ್ರದ ಟೀಸರ್ ನೋಡಿದವರು ಕೆಜಿಎಫ್ ರೀತಿಯೇ ಇದೆ ಎನ್ನುತ್ತಿರುವುದೂ ನಿಜ. ಆದರೆ ನಮ್ಮ ಸಿನಿಮಾ ಕೆಜಿಎಫ್' ಥರ ಇಲ್ಲ, ನಮ್ಮದು ಬೇರೆಯದ್ದೇ ಕತೆ. ಹಾಲಿವುಡ್ ರೀತಿ ಕೆಜಿಎಫ್ ಮಾಡಿದರು. ನಾವು ಕೆಜಿಎಫ್' ರೀತಿ ಮಾಡಿದ್ದೇವೆ. ಕೆಜಿಎಫ್' ಬಂದಮೇಲೆ ಯಾರೂ ಕೆಜಿಎಫ್' ರೀತಿ ಮಾಡೋಕಾಗಲ್ಲ ಎಂದರು ಆಗ ನಾನು ಪ್ರಯತ್ನ ಮಾಡೋಣ ಎಂದು ಮುಂದೆ ಬಂದೆ. ಕೆಜಿಎಫ್' ಒಂದು ಬೆಂಚ್ ಮಾರ್ಕ್ ಸಿನಿಮಾ. ಅದರಿಂದ ಸ್ಪೂರ್ತಿ ಪಡೆದು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಚಿತ್ರದ ಮೊದಲ ಹಾಡು 4ನೇ ತಾರೀಕು ಹೈದರಾಬಾದಿನಲ್ಲಿ ರಿಲೀಸ್ ಆಗುತ್ತಿದೆ. ಕಬ್ಜದಲ್ಲಿ ಉಪೇಂದ್ರ, ಸುದೀಪ್, ಶ್ರಿಯಾ ಸರಣ್ ಪ್ರಧಾನ ಪಾತ್ರದಲ್ಲಿದ್ದಾರೆ. ಸಿನಿಮಾ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನದಂದು ಅಂದರೆ 17 ಮಾರ್ಚ್ಗೆ ಬಿಡುಗಡೆ ಆಗಲಿದೆ. ಅಂದಹಾಗೆ ಕಬ್ಜ ಕೂಡಾ ಕೆಜಿಎಫ್ ಮಾದರಿಯಲ್ಲಿ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ.