ಇದು ಪ್ರಚಾರದ ತಂತ್ರವಾ.. ಗೊತ್ತಿಲ್ಲ. ಮಾಟಮಂತ್ರದ ಕಥೆ ಇರುವ ಚಿತ್ರ ಸಕೂಚಿ. ಸಕೂಚಿ ಎಂಬ ಹೊಸಬರ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ನಿರ್ದೇಶಕರು ವಿಚಿತ್ರವಾಗಿ ವರ್ತಿಸಿ ಅಚ್ಚರಿ ಮೂಡಿಸಿದ್ದಾರೆ. ಸಕೂಚಿ ಚಿತ್ರಕ್ಕೆ ಡೈರೆಕ್ಟರ್ ಆಗಿರುವುದು ಅಶೋಕ್ ಎಂಬುವವರು. ಚಿತ್ರದ ಸುದ್ದಿಗೋಷ್ಠಿಗೆ ಮಂತ್ರವಾದಿಯ ಗೆಟಪ್ಪಿನಲ್ಲೆ ಬಂದಿದ್ದರು.
ಸುದ್ದಿಗೋಷ್ಠಿಯಲ್ಲಿ ವಿಚಿತ್ರವಾಗಿ ವರ್ತಿಸಿದ ಅಶೋಕ್ ಅವರನ್ನು ಸುದ್ದಿಗೋಷ್ಠಿಯಿಂದ ಹೊರಗೆ ಕಳಿಸಲಾಯ್ತು. ವಿಡಿಯೋ ಅಲ್ಲಿ ಇಲ್ಲಿ ಹರಿದಾಡಿತು.
ಸುದ್ದಿಗೋಷ್ಠಿಯಲ್ಲಿ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ ಅಶೋಕ್ ಅವರನ್ನು ಕಂಟ್ರೋಲ್ ಮಾಡಲು ಜೊತೆಯಲ್ಲಿದ್ದವರು ಟ್ರೈ ಮಾಡ್ತಾರೆ. ಯಾರಿಗೂ ಬಗ್ಗಲ್ಲ. ಮೈಮೇಲೆ ದೇವರು ಬಂದಂತೆ ಆಡುತ್ತಾ ವಿಚಿತ್ರವಾಗಿ ಕಿರುಚುತ್ತಾ ಇರುತ್ತಾರೆ. ಕೊನೆಗೆ ನಾಯಕಿ ಮುಟ್ಟುವುದಕ್ಕೂ ನಿರ್ದೇಶಕ ಕುಸಿದು ಬೀಳೋದಕ್ಕೂ ಒಂದೇ ಆಗಿ, ಅದೇ ಈಗ ಕಾಮಿಡಿ ವಿಷಯವಾಗಿದೆ.
ನಾನು ಈ ಸಕೂಚಿ ಎಂಬ ಶಬ್ದವನ್ನು ಒಂದಿಷ್ಟು ಕಡೆ ಕೇಳಿದ್ದೆ. ಆ ನಂತರ ಸಕೂಚಿಗೆ ಅರ್ಥ ಅತಿ ಘೋರವಾದ ವಾಮಾಚಾರ ಎಂದು ಗೊತ್ತಾಯ್ತು. ಈ ಬ್ಲಾಕ್ ಮ್ಯಾಜಿಕ್ ಕಥೆಯನ್ನು ತೆಗೆದುಕೊಂಡು ಕಮರ್ಷಿಯಲ್ ಆಗಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಾಯಕ ಹೇಗೆ ಸಕೂಚಿಗೆ ಒಳಗಾಗುತ್ತಾನೆ ಎಂಬುದು ಮುಖ್ಯವಾದ ಅಂಶ. ಮ್ಮ ಸಕೂಚಿ ಸಿನಿಮಾವನ್ನು ದೈವ ಬಬ್ಬುಸ್ವಾಮಿಗೆ ಅರ್ಪಣೆ ಮಾಡುತ್ತೇನೆ ಎಂದಿದ್ದಾರೆ ನಿರ್ದೇಶಕ ಅಶೋಕ್.
ಸಕೂಚಿ ಸಿನಿಮಾದಲ್ಲಿ ಡಯಾನಾ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಅವರ 'ರಂಗನಾಯಕಿ' ಸಿನಿಮಾದಲ್ಲಿ ಅಭಿನಯಯಿಸಿದ್ದ ತ್ರಿವಿಕ್ರಮ ಸಾಮ್ರಾಟ್ ಸಕೂಚಿಯಲ್ಲಿ ಹೀರೋ ಆಗಿದ್ದಾರೆ.
ನೈಜ ಘಟನೆಗಳನ್ನು ಹೆಕ್ಕಿಕೊಂಡು ಈ ಸಿನಿಮಾ ಮಾಡಲಾಗಿದ್ದು 30 ರಿಂದ 40 ಮಂಗಳ ಮುಖಿಯರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರಂತೆ. 'ಸಕೂಚಿ' ಚಿತ್ರಕ್ಕೆ ಬಿಟ್ ಗುರು ಬ್ಯಾಂಡ್ ಖ್ಯಾತಿಯ ಗಣೇಶ್ ಗೋವಿಂದಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವಿನ್ ಬಿ. ಸಿ. ನಿರ್ಮಾಣದ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಕರ್ ಜೆ ಹಾಗೂ ಮಹಾವೀರ್ ಪ್ರಸಾದ್ ಸಾಥ್ ನೀಡಿದ್ದಾರೆ. ಅಂದಹಾಗೆ ಸಕೂಚಿ ಪದಕ್ಕೆ ವಾಮಾಚಾರದಲ್ಲಿ ಸಾವಿನ ಸೂಚಿ ಅಥವಾ ಸಾವಿನ ಸೂಚಕ ಎಂಬ ಅರ್ಥವಿದೆ.