ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿರುವ ಪಠಾಣ್ ಚಿತ್ರ ಜನವರಿ 25ಕ್ಕೆ ರಿಲೀಸ್ ಆಯ್ತು. ಚಿತ್ರ ಬಿಡುಗಡೆಗೂ ಮೊದಲು ಬಾಯ್ಕಾಟ್ ಬಾಯ್ಕಾಟ್ ಕೂಗು ಕೇಳಿಸಿತ್ತು. ಬೇಷರಂ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟಿದ್ದ ದೀಪಿಕಾ ಪಡುಕೋಣೆ ವಿವಾದದ ಅಲೆಯೆಬ್ಬಿಸಿದ್ದರು. ಆದರೆ ಶಾರೂಕ್, ದೀಪಿಕಾ ಇಬ್ಬರೂ ಹಿಂದೂ ವಿರೋಧಿಗಳು ಎಂಬುದೇ ಬಾಯ್ಕಾಟ್ ಕೂಗಿಗೆ ಪ್ರಬಲ ಕಾರಣವಾಗಿತ್ತು. ಈ ಮೊದಲು ಅಮೀರ್ ಖಾನ್, ಇದೇ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ರಣ್ವೀರ್ ಸಿಂಗ್, ಆಲಿಯಾ ಭಟ್, ಅಕ್ಷಯ್ ಕುಮಾರ್ ಚಿತ್ರಗಳು ಬಾಯ್ಕಾಟ್ ಬಿಸಿಯಲ್ಲಿ ಬೂದಿಯಾಗಿದ್ದವು. ಹೀಗಾಗಿ ಬರೋಬ್ಬರಿ 5 ವರ್ಷಗಳ ಗ್ಯಾಪ್ ನಂತರ ಬಂದ ಶಾರೂಕ್`ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದವರಿಗೆ ಶಾರೂಕ್ ಭರ್ಜರಿ ಉತ್ತರ ಕೊಟ್ಟಿದ್ದರೆ.
ಪಠಾಣ್ ಬಿಡುಗಡೆಯಾದ ಎರಡೇ ದಿನಗಳಲ್ಲಿ 200 ಕೋಟಿ ಕ್ಲಬ್ ದಾಟಿದೆ. ಮೊದಲ ದಿನ 103 ಕೋಟಿ ಹಾಗೂ 2ನೇ ದಿನ 113 ಕೋಟಿ ಕಲೆಕ್ಷನ್ ಮಾಡಿದೆ. ಸಿದ್ಧಾರ್ಥ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಅಭಿಮಾನಿಗಳು ಲಾಜಿಕ್ ಹುಡುಕಿಲ್ಲ. ಕೇವಲ ಮನರಂಜನೆ ತೆಗೆದುಕೊಂಡು ಬಾಕ್ಸಾಫೀಸ್ ತುಂಬಿಸಿದ್ದಾರೆ. ಶಾರೂಕ್ ಮತ್ತು ದೀಪಿಕಾ ನಟನೆಯ ಹಿಂದಿನ ಎಲ್ಲ ಚಿತ್ರಗಳೂ ಗೆದ್ದಿದ್ದವು. ಹೀಗಾಗಿ ಈ ಬಾರಿಯೂ ಗೆದ್ದು ತಾವು ಲಕ್ಕಿಜೋಡಿ ಎನಿಸಿಕೊಂಡಿದೆ ಶಾರೂಕ್-ದೀಪಿಕಾ ಜೋಡಿ.