ಬಘೀರ. ಶ್ರೀಮುರಳಿ ಅಭಿನಯದ ಸಿನಿಮಾ. ಶೂಟಿಂಗ್ ಕೊನೆಯ ಹಂತದಲ್ಲಿರುವಾಗ ಅಚಾತುರ್ಯ ನಡೆದು ಸದ್ಯಕ್ಕೆ ಕಾಲಿನ ಆಪರೇಷನ್ ಅಗಿರುವ ಶ್ರೀಮುರಳಿ ರೆಸ್ಟ್`ನಲ್ಲಿದ್ದಾರೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಬ್ಬ ಸೂಪರ್ ಕಾಪ್ ಎಂಟ್ರಿಯಾಗಿದೆ. ಫಹಾದ್ ಫಾಸಿಲ್. ಮಲಯಾಳಂನ ಈ ನಟ ಇತ್ತೀಚೆಗೆ ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರದಲ್ಲೂ ಸೂಪರ್ ಕಾಪ್ ಪಾತ್ರ ಮಾಡಿದ್ದರು. ಬಘೀರದಲ್ಲಿ ಶ್ರೀಮುರಳಿ ಅವರದ್ದೂ ಪೊಲೀಸ್ ಪಾತ್ರವೇ. ಫಹಾದ್ ಫಾಸಿಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಮಾಹಿತಿ ಇದೆ.
ನಟ ಫಹಾದ್ ಫಾಸಿಲ್ ಈಗಾಗಲೇ ಕನ್ನಡದ ನಿರ್ದೇಶಕ ಪವನ್ಕುಮಾರ್ರ ‘ಧೂಮಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇದರ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ‘ಬಘೀರ’ ಸಿನಿಮಾ ಮೂಲಕ ಅವರು ಮತ್ತೊಬ್ಬ ಕನ್ನಡ ನಿರ್ದೇಶಕರ ಸಿನಿಮಾದಲ್ಲಿ ಕೆಲಸ ಮಾಡುವಂತಾಗಿದೆ. ‘ಧೂಮಂ’ ಮತ್ತು ‘ಬಘೀರ’ ಸಿನಿಮಾಗಳೆರಡೂ ಒಂದೇ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. ಇದು ಸಹ ಅವರು ‘ಬಘೀರ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಬಘೀರ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಆದರೆ ಅದು ವಿಲನ್ ಪಾತ್ರ ಅಲ್ಲ. ಪ್ರಮುಖ ಪಾತ್ರ ಎನ್ನುತ್ತಿದೆ ಚಿತ್ರತಂಡ. ಆ ಪ್ರಕಾರವೇ ಫಹಾದ್ ಅವರು ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದ್ದು, ಡಾ.ಸೂರಿ ನಿರ್ದೇಶನವಿದೆ.