ಆಸ್ಕರ್ ನಾಮನಿರ್ದೇಶನ ಹೊರಬಿದ್ದಿದೆ. ಇದು ಕನ್ನಡಿಗರಿಗೆ ಬೇಸರದ ವಿಷಯವಾದರೂ ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಹೊಳಪನ್ನಂತೂ ತಂದಿದೆ. ಕಾಂತಾರ, ವಿಕ್ರಾಂತ್ ರೋಣ ಎರಡೂ ಚಿತ್ರಗಳು ಅಂತಿಮ ನಾಮ ನಿರ್ದೇಶನ ಸುತ್ತಿಗೆ ಹೋಗಿಲ್ಲ. ಕಾಶ್ಮೀರ್ ಫೈಲ್ಸ್, ಗಂಗೂಬಾಯಿ.. ಅಷ್ಟೇ ಏಕೆ, ಭಾರತೀಯ ಸರ್ಕಾರದಿಂದಲೇ ಆಯ್ಕೆಯಾಗಿದ್ದ ಅಧಿಕೃತ ಸಿನಿಮಾ ಚೆಲ್ಲೋ ಶೋ ಚಿತ್ರ ಕೂಡಾ ಆಸ್ಕರ್ ಆರಂಭದ ಸುತ್ತಿನಲ್ಲೇ ಹೊರಬಿದ್ದಿದೆ.
ಆದರೆ ಆರ್.ಆರ್.ಆರ್. ಚಿತ್ರದ ನಾಟು ನಾಟು.. ಅಂತಿಮ ನಾಮನಿರ್ದೇಶನದ ಸುತ್ತಿನಲ್ಲಿ ಉಳಿದುಕೊಂಡಿದೆ. ಇವತ್ತು ಸಂತೋಷದ ದಿನ. ಭಾರತ ಮಾತೆಯ ಮಡಿಲಿಗೆ, ಕನ್ನಡಾಂಬೆಯ ಮಡಿಲಿಗೆ, ನಿಮ್ಮ ಲಹರಿ ಸಂಸ್ಥೆಗೆ ಖಖಖ ರಾಜಮೌಳಿ ಸಾಹೇಬ್ರ ನಿರ್ದೇಶನ.. ಕೀರವಾಣಿಯವರ ಸಂಗೀತದ ನಾಟು ನಾಟು ಹಾಡಿಗೆ ತಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿತ್ತು.ಈಗ ಆಸ್ಕರ್ ಅವಾರ್ಡ್ನ ಟಾಪ್ 5ಗೆ ಸೆಲೆಕ್ಟ್ ಆಗಿದೆ
ಹೀಗೊಂದು ಹೃದಯಕ್ಕೆ ನಾಟುವಂತಾ ಟ್ವೀಟ್ ಮಾಡಿದ್ದಾರೆ ಲಹರಿ ವೇಲು. ನಾಟು ನಾಟು ಹಾಡು ಅಂತಿಮ ಸುತ್ತಿನಲ್ಲಿ 5 ಬೆಸ್ಟ್ ಮ್ಯೂಸಿಕ್`ಗಳ ಜೊತೆ ಸ್ಪರ್ಧೆಯಲ್ಲಿದೆ. ಇದೇ ಹಾಡಿಗೆ ಎಂ.ಎಂ.ಕೀರವಾಣಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದ್ದರು. ರಾಜಮೌಳಿ, ರಾಮ್ ಚರಣ್ ತೇಜ, ಜೂ.ಎನ್.ಟಿ.ಆರ್. ಎಲ್ಲರೂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು. ಈಗ ಅಸ್ಕರ್ ರೇಸ್`ಗೂ ಹೋಗಿರುವ ರಾಜಮೌಳಿಯವರ ಆರ್.ಆರ್.ಆರ್. ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಇನ್ನು ಆರ್.ಆರ್.ಆರ್. ಚಿತ್ರವೂ ಅಷ್ಟೆ, ನಾಟು ನಾಟು ಹಾಡೊಂದನ್ನು ಬಿಟ್ಟು ಮಿಕ್ಕ ಯಾವುದೇ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲ.
ಇವುಗಳ ಜೊತೆಗೆ ವಿವಿಧ ಪಕ್ಷಿ, ಪ್ರಾಣಿಗಳನ್ನು ಸಾಕುವ ದೆಹಲಿಯ ಮುಸ್ಲಿಂ ಕುಟುಂಬವೊಂದರ ಕುರಿತ ಡಾಕ್ಯುಮೆಂಟರಿ 'ಆಲ್ ದಟ್ ಬ್ರೀತ್ಸ್' ಆಸ್ಕರ್ಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ್ದೇ ಆದ 'ದಿ ಎಲಿಫೆಂಟ್ ವಿಸ್ಪರ್ಸ್' ಸಹ ನಾಮಿನೇಟ್ ಆಗಿದೆ.
Related Articles ;-