ನಾನು ಕೊರಗಜ್ಜನ ದೇವಾಲಯಕ್ಕೆ ಹೋಗಿ ತುಂಬಾ ದಿನ ಆಗಿತ್ತು. ಹೀಗಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ದೇವಸ್ಥಾನಕ್ಕೆ ಹೋಗುವುದೂ ತಪ್ಪು ಅಂದ್ರೆ ಹೇಗೆ? ಕೊರಗಜ್ಜನ ದೇವಾಲಯದಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಇನ್ನೂ ಸಾಧಿಸಬೇಕಾಗಿರೋದು ಸಾಕಷ್ಟು ಇದೆ. ಒಂದ್ವೇಳೆ ನಾನು ಮದುವೆಯಾದರೆ ನಿಮ್ಮೆಲ್ಲರ ಗಮನಕ್ಕೆ ತರುತ್ತೇನೆ.
ಈ ಮಾತು ಹೇಳಿ ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ ಪ್ರೇಮಾ. ಇತ್ತೀಚೆಗೆ ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ವೇಳೆ ಪ್ರೇಮಾ ತಮ್ಮ ಎರಡನೇ ಮದುವೆ ಕುರಿತು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬಗ್ಗೆ ಸ್ವತಃ ಪ್ರೇಮಾ ಮಾತನಾಡಿದ್ದಾರೆ.
ನಟಿ ಪ್ರೇಮಾ ಒಬ್ಬ ಹುಡುಗನನ್ನು ನೋಡಿದ್ದಾರೆ. ಆ ಹುಡುಗನ ಜೊತೆಯಲ್ಲೇ ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಬೇಡಿಕೆ ಇಟ್ಟಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ನಟಿ ಪ್ರೇಮಾ ಅವರೇನೂ ಹೇಳಿರಲಿಲ್ಲವಾದರೂ ಸುದ್ದಿಗೇನು ಕೊರತೆಯಾಗಿರಲಿಲ್ಲ. 2016ರಲ್ಲಿ ಜೀವನ್ ಅಪ್ಪಚ್ಚು ಎಂಬುವರ ಜೊತೆ ಮದುವೆಯಾಗಿದ್ದ ಪ್ರೇಮಾ ಅವರ ವೈವಾಹಿಕ ಜೀವನ ಸರಿಯಾಗಿರಲಿಲ್ಲ. ಆ ಮದುವೆಯ ಬಗ್ಗೆ ಯಾವ ಮಾತನ್ನೂ ಆಡದ ಪ್ರೇಮಾ ವಿಚ್ಛೇದನ ಪಡೆದುಕೊಂಡಿದ್ದರು.
46 ವರ್ಷ ವಯಸ್ಸಿನ ಪ್ರೇಮಾ 90ರ ದಶಕವನ್ನು ಆಳಿದವರು. ಕನ್ನಡ, ತೆಲುಗು, ತಮಿಳು ಚಿತ್ರರಂಗವನ್ನು ರೂಲ್ ಮಾಡಿದ್ದ ಪ್ರೇಮಾ, ರಾಜ್ ಕ್ಯಾಂಪ್ ಹುಡುಗಿ. ಶಿವರಾಜ್ ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಮೇಶ್, ರವಿಚಂದ್ರನ್, ವೆಂಕಟೇಶ್, ಮೋಹನ್ ಲಾಲ್.. ಹೀಗೆ ದಕ್ಷಿಣ ಭಾರತದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದವರು ಪ್ರೇಮಾ.
Related Articles :-