ಈ ವರ್ಷದ.. ಕನ್ನಡದಿಂದ ತಯಾರಾಗಿರುವ ಪ್ಯಾನ್ ಇಂಡಿಯಾ ಮೂವಿಗಳಲ್ಲಿ ನಂ.1 ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್, ಶ್ರಿಯಾ ಸರಣ್ ನಟಿಸಿರೋ ಚಿತ್ರ ಒಟ್ಟಾರೆ 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದೀಗ ಕಬ್ಜ ರಿಲೀಸ್ ಮಾರ್ಚ್ 17ಕ್ಕೆ ಎಂದು ಘೋಷಿಸಿಬಿಟ್ಟಿದ್ದಾರೆ. ಮಾರ್ಚ್ 17, ಪುನೀತ್ ರಾಜಕುಮಾರ್ ಜಯಂತಿ.
ಕಬ್ಬ ಚಿತ್ರದ ಬಗ್ಗೆ ಪುನೀತ್ ಅವರಿಗೆ ಭಾರಿ ಕುತೂಹಲವಿತ್ತು. ಆಗಾಗ್ಗೆ ಶೂಟಿಂಗ್`ಗೆ ಬಂದು ಹೋಗುತ್ತಿದ್ದರು. ಅವರಿಂದಲೇ ಟೀಸರ್, ಟ್ರೇಲರ್ ರಿಲೀಸ್ ಮಾಡಿಸುವ ಪ್ಲಾನ್ ಕೂಡಾ ಇತ್ತು. ಈಗ ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಆರ್.ಚಂದ್ರು.
ಆ ವೇಳೆಗೆ ಯುಗಾದಿಯೂ ಬರಲಿದೆ. ಹೊಸ ವರ್ಷದ ಆರಂಭಕ್ಕೆ ಕಬ್ಜ ಕೊಡುಗೆಯಾಗಲಿದೆ ಎಂದಿದ್ದಾರೆ ಆರ್.ಚಂದ್ರು. ಒಟ್ಟಾರೆ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕಬ್ಜ ರಿಲೀಸ್ ಆಗಲಿದೆ. ಕಬ್ಜದಲ್ಲಿ 1940ರ ಕಾಲದ ಭೂಗತ ಲೋಕದ ಕಥೆಯಿದೆ. ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. 2022ರಲ್ಲಿ ಕನ್ನಡ ಚಿತ್ರರಂಗ ಇಂಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದವು. ಇದೀಗ ಕಬ್ಜ. ಜೊತೆಗೆ ಪುನೀತ್ ಜಯಂತಿ. ಕಬ್ಬ ಹಬ್ಬವಾಗಲಿದೆ.