` ಹಿರಿಯ ನಟ ಲಕ್ಷ್ಮಣ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹಿರಿಯ ನಟ ಲಕ್ಷ್ಮಣ್ ನಿಧನ
Lakshman Image

ಕನ್ನಡ ಚಿತ್ರರಂಗದ ಹೆಸರಾಂತ ನಟ ಲಕ್ಷ್ಮಣ್ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದ ನಟ ಲಕ್ಷ್ಮಣ್ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಮೂಡಲಗೆರೆಯ ಮನೆಯಲ್ಲಿದ್ದ ಅವರಿಗೆ ಇಂದು ಬೆಳಗ್ಗೆ  ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳದಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಲಕ್ಷ್ಮಣ್  ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸದ್ದ ಲಕ್ಷ್ಮಣ್ ವೀರಪ್ಪನಾಯ್ಕ, ಯಜಮಾನ, ಸೂರ್ಯವಂಶ, ಮಲ್ಲ ಹೀಗೆ ಹಲವು ಚಿತ್ರಗಳಲ್ಲಿ ಖಳನಟರಾಗಿ ಮಿಂಚಿದ್ದರು.

ರೆಬಲ್ ಸ್ಟಾರ್ ಅಂಬರೀಶ್ ಅವರ ಅಚ್ಚುಮೆಚ್ಚಿನ ನಟನಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಚಿತ್ರರಮಗದ ಸ್ಟಾರ್ ನಟರೊಂದಿಗೆ ನಟಿಸಿದ್ದರು.  

ತಂದೆ ಸೈನಿಕರಾಗಿದ್ದರು. ಸಹೋದರ ಪೊಲೀಸ್. ಆದರೆ ಲಕ್ಷ್ಮಣ್ ಅವರನ್ನು ಸೆಳೆದಿದ್ದು ಬಣ್ಣದ ಲೋಕ. ಮೊದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಬಿಡುವಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಸಿನಿಮಾ ರಂಗಕ್ಕೆ ಬಂದರು. ಚಿತ್ರರಂಗದಲ್ಲಿ ಸಿಕ್ಕ ಅವಕಾಶಗಳಲ್ಲಿಯೇ ಅದ್ಭುತವಾಗಿ ನಟಿಸಿ ಸಾವಿರಾರು ಹೃದಯಗಳನ್ನು ಗೆದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

Related Articles :-

Veteran kannada actor Lakshman Passes away due to Heart Attack