ಜನವರಿ 24ನ್ನು ಇಡೀ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ವರ್ಷದ ಇಂಡಿಯಾದ ಟಾಪ್ ನಿರೀಕ್ಷಿತ ಚಿತ್ರಗಳಲ್ಲಿ ಕಬ್ಜಾ ಕೂಡಾ ಒಂದು. ಕರ್ನಾಟಕದ ಟಾಪ್ 1 ಬಹುನಿರೀಕ್ಷಿತ ಸಿನಿಮಾ. ಏಕೆಂದರೆ ಚಿತ್ರದಲ್ಲಿ ಇರೋದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್. ಸಹಜವಾಗಿಯೇ ಕುತೂಹಲ ಜಾಸ್ತಿ. ಆ ಕುತೂಹಲ ಹೆಚ್ಚಿಸಲೆಂದೇ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದ್ದಾರೆ. ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತೇವೆ ಎಂದು ಒಂದು ದಿನಾಂಕ ಘೋಷಿಸುವುದು ಹೊಸತು. ಅಂತಹ ಯೋಜನೆ ಸಿದ್ಧ ಮಾಡಿರುವ ಚಂದ್ರು, ಯಾವಾಗ ರಿಲೀಸ್ ಅನ್ನೋದನ್ನ ಜನವರಿ 24ರಂದು ಘೋಷಣೆ ಮಾಡ್ತಾರಂತೆ.
ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಐದಲ್ಲ, ಒಟ್ಟಾರೆ 8 ಬಾಷೆಗಳಲ್ಲಿ ಬರುತ್ತಿರೋ ಚಿತ್ರ ಕಬ್ಜ. ಕಳೆದ ವರ್ಷವಿಡೀ ಕನ್ನಡ ಚಿತ್ರಗಳ ಅಬ್ಬರ ಇಡೀ ಇಂಡಿಯಾದಲ್ಲಿ ಕೇಳಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಭರ್ಜರಿ ಭರ್ಜರಿ ಭರ್ಜರಿ ಸದ್ದು ಮಾಡಿದ್ದವು. ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದರ ಜೊತೆಗೆ ಇಂಡಿಯನ್ ಪ್ರೇಕ್ಷಕರ ಹೃದಯವನ್ನು ಕೊಳ್ಳೆ ಹೊಡೆದಿದ್ದವು. ಇದೀಗ ಕಬ್ ಚಿತ್ರದ ರಿಲೀಸ್ ಡೇಟ್ ಜನವರಿ 24ರಂದು ಘೋಷಣೆಯಾಗುತ್ತಿದೆ.