` ರಮ್ಯ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಶಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಮ್ಯ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಶಾಕ್
Rajendra Singh Babu image

ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರಕ್ಕೆ ಕೋರ್ಟ್‍ನಿಂದ ಸ್ಟೇ ತಂದಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ಚಿತ್ರೀಕರಣ ಮತ್ತು ಬಹುತೇಕ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ರಿಲೀಸ್ ಮಾಡುವುದಕ್ಕೆ ರೆಡಿಯಾಗುತ್ತಿದ್ದ ಚಿತ್ರತಂಡಕ್ಕೆ ಇದು ದೊಡ್ಡ ಶಾಕ್. ಇದು ರಮ್ಯಾ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಆಪಲ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವ ಸಿನಿಮಾ. ಈ ಚಿತ್ರಕ್ಕೆ ಅವರೇ ಸ್ವತಃ ನಾಯಕಿಯಾಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಸಿರಿ ರವಿಕುಮಾರ್ ಅವರನ್ನು ಸ್ವತಃ ರಮ್ಯ ಆಯ್ಕೆ ಮಾಡಿದ್ದರು.

ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರ ನಮ್ಮದು. ಈಗಾಗಲೇ ಈ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದೇವೆ ಎನ್ನುವುದು ಎಸ್.ವಿ.ಆರ್. ವಾದ. ಅಂಬರೀಷ್ ಮತ್ತು ಸುಹಾಸಿನಿ ಪ್ರಧಾನ ಪಾತ್ರದಲ್ಲಿರುವ ಚಿತ್ರ ಸೆಟ್ಟೇರಿದ್ದದ್ದು ನಿಜ. ಆದರೆ ಚಿತ್ರ ಏನಾಯ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. ಅಂಬಿ ನಿಧನದೊಂದಿಗೆ ಇಡೀ ಚಿತ್ರ ನೆನೆಗುದಿಗೆ ಬಿದ್ದಿದೆ. ಆದರೆ ಎಸ್.ವಿ.ಆರ್. ಪ್ರಕಾರ ಶೇ.80ರಷ್ಟು ಶೂಟಿಂಗ್ ಆಗಿದೆ.

ಮುಂದೇನು..? ರಮ್ಯ ಈ ಟೈಟಲ್ಲಿಗಾಗಿ ಕಾನೂನು ಹೋರಾಟ ನಡೆಸಬೇಕು ಇಲ್ಲವೇ ಹೊಸ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಬೇಕು. ಕೋರ್ಟಿನಲ್ಲಿ ವಾದ ಮಾಡುವುದಕ್ಕೆ ನಿಂತರೆ ಯಾವಾಗ ಮುಗಿಯುವುದೋ ಗೊತ್ತಿರಲ್ಲ. ಇಲ್ಲವೇ ರಾಜಿ ಸಂಧಾನ ಸೂತ್ರದ ಮಾರ್ಗವೂ ಇದೆ.