ಕನ್ನಡದಲ್ಲಿ ಪ್ರಣಯಪಕ್ಷಿಗಳು ಎನ್ನಬಹುದು, ಈ ಲವ್ ಬಡ್ರ್ಸ್‍ನ್ನ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕರು. ಸಾಫ್ಟ್ ವೇರ್ ಎಂಜಿನಿಯರ್ ಆಗಿ, ವೀಕೆಂಡ್‍ನಲ್ಲಿ ರೈಡಿಂಗ್ ಮಾಡುತ್ತಾ ಲೈಫ್ ಎಂಜಾಯ್ ಮಾಡುವ ಹುಡುಗನಾಗಿ ಕೃಷ್ಣ ನಟಿಸಿದ್ದರೆ, ಸ್ವಾವಲಂಬಿ ಹಾಗೂ ಹೋರಾಟಗಾರ್ತಿಯೂ ಆಗಿ ಮಿಲನಾ ನಟಿಸಿದ್ದಾರೆ. ಇವರಿಬ್ಬರ ನಡುವೆ ಸಂಯುಕ್ತ ಹೊರನಾಡು ಲಾಯರ್ ಆಗಿ ಬರುತ್ತಾರೆ.
ಸಂಯುಕ್ತಾ ಹೊರನಾಡು ಪಾತ್ರದ ಹೆಸರು ಮಾಯಾ. ಹೇಗಿರುತ್ತೆ ಲಾಯರ್ ಲುಕ್ಕು ಅನ್ನೋದಕ್ಕೆ ಒಂದು ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದಾರೆ ಶೇಖರ್. ಸಕ್ಸಸ್‍ಫುಲ್ ಲಾಯರ್ ಇಷ್ಟು ಚೆನ್ನಾಗಿ, ಸುಂದರವಾಗಿರ್ತಾರಾ ಅನ್ನೋ ಕುತೂಹಲ ಹುಟ್ಟಿಸುವಂತಿರುವ ಮಾಯಾ ಪಾತ್ರ ಚಿತ್ರದೊಳಗೆ ಹೇಗೆ ಎಂಟ್ರಿಯಾಗುತ್ತೆ ಅನ್ನೋದೇ ಕುತೂಹಲ. ಕಡ್ಡಿಪುಡಿ ಚಂದ್ರು ನಿರ್ಮಾಣದ ಲವ್ ಬಡ್ರ್ಸ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಮುಂದಿನ ವಾರದಿಂದ ಚಿತ್ರೀಕರಣ ಶುರುವಾಗಲಿದೆ.