ಧ್ರುವ 369. ಇದು ಹೊಸ ಚಿತ್ರದ ಹೆಸರು. ನಿರ್ದೇಶಕರ ಹೆಸರು ಶಂಕರ್ ನಾಗ್. ಇದು ಪುರಾಣದಲ್ಲಿ ಬರುವ ಧ್ರುವ ನಕ್ಷತ್ರಕ್ಕೂ ಈಗಿನ ಖಗೋಳ ಶಾಸ್ತ್ರಕ್ಕೂ ಸಂಬಂಧಪಟ್ಟ ಕಥೆಯಂತೆ. ಈ ಚಿತ್ರದ ಓಪನಿಂಗ್, ಇಂಟರ್‍ವೆಲ್ ಹಾಗೂ ಕ್ಲೈಮಾಕ್ಸ್‍ನಲ್ಲಿ ರಾಘಣ್ಣ ಬರುತ್ತಾರೆ. ಅವರಿಂದಲೇ ಇಡೀ ಚಿತ್ರದ ಕಥೆ. ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ ಶಂಕರ್ ನಾಗ್.
ರಮೇಶ್ ಭಟ್, ಅರುಣ್ ಸಾಗರ್, ಅತೀಶ್ ಶೆಟ್ಟಿ, ಚಂದನಾ, ನಮಿತಾ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀಕೃಷ್ಣ ಕಾಂತಿಲ ಚಿತ್ರದ ನಿರ್ಮಾಪಕರು. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಇತ್ತೀಚೆಗೆ ನಂದಿಬೆಟ್ಟದಲ್ಲಿ ನಡೆಯಿತು. ಸತೀಶ್ ಬಾಬು ಸಂಗೀತ ನಿರ್ದೇಶನವಿದ್ದು, ಮಹಾಬಲ ಛಾಯಾಗ್ರಹಣ ಇದೆ.