ದಿಯಾ ಚಿತ್ರದಲ್ಲಿ ಈ ಹುಡುಗಿಯ ಬಗ್ಗೆ ಬೇಸರ, ಹತಾಶೆ ಪಟ್ಟುಕೊಂಡಿದ್ದ ಪ್ರೇಕ್ಷಕರಿಗೆ ಆಕೆಯ ಬಗ್ಗೆ ಕನಿಕರ ಮೂಡಿತ್ತು. ಪಾಪ ಖುಷಿ.. ದೇವರು ಆಕೆಗೆ ಒಳ್ಳೆಯದು ಮಾಡಲೇ ಇಲ್ಲ. ಏನ್ ಬ್ಯಾಡ್ ಲಕ್ ಅನ್ನೊಂಡು ಕಣ್ಣೀರಿಟ್ಟ ಪ್ರೇಕ್ಷಕರನ್ನು, ಸ್ಪೂಕಿ ಕಾಲೇಜ್‍ನಲ್ಲಿ ಹೆದರಿಸಿ ನಡುಗಿಸಿ ಭಯ ಹುಟ್ಟಿಸಿ ಕಳಿಸಿದ್ದರು. ಈಗ ನಗಿಸೋದಕ್ಕೆ ಬರುತ್ತಿದ್ದಾರೆ. ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಲಿಖಿತ್ ಶೆಟ್ಟಿ ಈ ಚಿತ್ರಕ್ಕೆ ಹೀರೋ. ವಿನಾಯಕ್ ಎಂಬುವವರ ಡೈರೆಕ್ಷನ್ ಇದೆ. ಅವರಿಗಿದು ಮೊದಲ ಸಿನಿಮಾ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ.
ನನಗೆ ಎಲ್ಲ ರೀತಿಯ, ಎಲ್ಲ ಜಾನರ್ ಸಿನಿಮಾ ಮಾಡೋಕೆ ಇಷ್ಟ. ಈಗಲೂ ಅಷ್ಟೆ, ಕತೆ ಬೇರೆಯದು. ರೊಮ್ಯಾಂಟಿಕ್ ಕಾಮಿಡಿ ಜಾನರ್ ಸ್ಟೋರಿ. ನಗಿಸುವುದು ಸುಲಭ ಅಲ್ಲ. ಆದರೆ ಈ ಸಿನಿಮಾ ನೋಡಿದ್ಮೇಲೆ ಖುಷಿ ಎಂತಹ ಪಾತ್ರಗಳಿಗೂ ಸೂಟ್ ಆಗುತ್ತಾಳೆ ಎಂದು ಪ್ರೇಕ್ಷಕರು ಅಂದುಕೊಳ್ಳಬೇಕು ಎನ್ನುತ್ತಾರೆ ಖುಷಿ. ಚಿತ್ರದಲ್ಲಿ ಅವರದ್ದು ವಿದೇಶದಿಂದ ವಾಪಸ್ ಆದ ಹುಡುಗಿಯ ಪಾತ್ರ. ಮದುವೆಯಾಗುವುದಕ್ಕಾಗಿಯೇ ಫಾರಿನ್ನಿಂದ ಬರುವ ಹುಡುಗಿ ನಾನು. ಚಿತ್ರದಲ್ಲಿ ಅಣ್ಣ-ತಂಗಿ ಸೆಂಟಿಮೆಂಟ್ ಕೂಡಾ ಇದೆ. ಅಣ್ಣ ಇನ್ನು ಸಿಕ್ಕಿಲ್ಲ ಎಂದು ನಗುತ್ತಾರೆ ಖುಷಿ ರವಿ. ಚಿತ್ರದಲ್ಲಿ ಇನ್ನೊಬ್ಬ ನಟಿ ಕೂಡಾ ಇದ್ಧಾರೆ. ಅವರನ್ನೂ ಚಿತ್ರತಂಡ ಸದ್ಯದಲ್ಲೇ ಫೈನಲ್ ಮಾಡಲಿದೆ.