ರಾಖಿ ಸಾವಂತ್ ಎಂದಿನಂತೆ ಮತ್ತೊಮ್ಮೆ ವಿವಾದದಿಂದಲೇ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ತಾನೇ ಮೈಸೂರಿನ ಆದಿಲ್ ಎಂಬುವವರ ಜೊತೆ ಮದುವೆಯಾಗಿದ್ದೇನೆ. ಅವನಿಗಾಗಿ ಮತಾಂತರವಾಗಿದ್ದೇನೆ. ಫಾತಿಮಾ ಆಗಿ ಬದಲಿಸಿಕೊಂಡಿದ್ದೇನೆ. ಈಗ ನೋಡಿದರೆ ಮದುವೆಯೇ ಆಗಿಲ್ಲ ಎನ್ನುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದ. ಇಬ್ಬರೂ ಜೊತೆಯಾಗಿದ್ದರು. ಏನೋ ಪ್ರಾಬ್ಲಂ ಕಳೀತು ಎಂದುಕೊಳ್ಳುತ್ತಿರುವಾಗಲೇ ರಾಖಿ ಸಾವಂತ್ ಅರೆಸ್ಟ್ ಆಗಿದ್ದಾರೆ.
ಇದೂ ಕೂಡಾ ವಿವಾದವೇ. ಕೆಲವು ತಿಂಗಳ ಹಿಂದೆ ನಟಿ ಶೆರ್ಲಿನ್ ಚೋಪ್ರಾ ಸಾಜಿದ್ ಖಾನ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಸಲ್ಮಾನ್ ಖಾನ್ ವಿರುದ್ಧವೂ ಕಿಡಿಕಿಡಿ ಯಾಗಿದ್ದರು.
ಸಾಜಿದ್ ಖಾನ್ ಪರ ನಿಂತಿದ್ದ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರ ಪರ್ಸನಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾಕ್ಕೆ ಕೊಟ್ಟಿದ್ದರು. ಇದರ ವಿರುದ್ಧ ಶೆರ್ಲಿನ್ ಚೋಪ್ರಾ ದೂರು ಕೊಟ್ಟಿದ್ದರು. ಆದರೆ ವಿಚಾರಣೆಗೆ ಹಾಜರಾಗದ ರಾಖಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆಂಟಿಸಿಪೇಟರಿ ಬೇಲ್ ವಜಾ ಮಾಡಿದ್ದ ಹಿನ್ನೆಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಕೊನೆಗೆ ರಾಖಿ ಸಾವಂತ್ ಜಡ್ಜ್ ಎದುರು ತಾಯಿಗೆ ಹುಷಾರಿಲ್ಲ ಎಂದು ಕಣ್ಣೀರಿಟ್ಟ ಹಿನ್ನೆಲೆ ಜಾಮೀನು ನೀಡಿದ್ದಾರೆ.