ದುನಿಯಾ ವಿಜಯ್ ಈ ಬಾರಿಯ ಹುಟ್ಟುಹಬ್ಬವನ್ನು ತಂದೆ ತಾಯಿಯ ಸಮಾಧಿ ಬಳಿ ಆಚರಿಸಿಕೊಂಡಿದ್ದಾರೆ. ವಿಜಯ್ ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಸಮಾಧಿ ಬಳಿ ಸೇರಿದ್ದರು. ತಂದೆ ತಾಯಿ ಇಬ್ಬರೂ ದೂರವಾದ ಮೇಲೂ ಅವರ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಈಗಲೂ ಆಗಾಗ್ಗೆ ಬೇಸರವಾದಾಗಲೆಲ್ಲ ಸಮಾಧಿ ಬಳಿ ಹೋಗುವ ವಿಜಯ್ ಹುಟ್ಟುಹಬ್ಬವನ್ನೂ ಅಲ್ಲೇ ಆಚರಿಸಿದ್ದಾರೆ. ಇದೇ ವೇಳೆ ಭೀಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ ವಿಜಯ್.
ಅಷ್ಟೇ ಅಲ್ಲ, ಜಡೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದಾರೆ ದುನಿಯಾ ವಿಜಯ್. ಭೀಮ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಅವರೇ ಈ ಚಿತ್ರಕ್ಕೂ ನಿರ್ಮಾಪಕ. ಗುರು ಶಿಷ್ಯರು ಖ್ಯಾತಿಯ ಜಡೇಶ್ ಕುಮಾರ್ ಡೈರೆಕ್ಟರ್.