ವಸಿಷ್ಠ ಸಿಂಹ ಈಗಾಗಲೇ ಕನ್ನಡ, ತೆಲುಗಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ತಮಿಳಿಗೂ ಹೊರಟಿದ್ದಾರೆ. ತಮಿಳಿನ ವೂಲ್ಫ್ ಹೆಸರಿನ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರದ್ದು ಪ್ರಮುಖ ಪಾತ್ರ. ಅಂದಹಾಗೆ ಈ ಚಿತ್ರದ ಹೀರೋ ಪ್ರಭುದೇವ. ವೆಂಕಟೇಶ್ ಅನ್ನೋವ್ರು ನಿರ್ದೇಶಿಸುತ್ತಿರೋ ವೂಲ್ಫ್ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿದೆ. ವಸಿಷ್ಠ ಸಿಂಹ ಅವರದ್ದು ಪ್ರಮುಖ ಪಾತ್ರವಾಗಿದ್ದು ಪ್ರಭುದೇವ ಜೊತೆಗೆ ಚಿತ್ರದಲ್ಲಿ ಅಂಜು ಕುರಿಯನ್, ಅನುಸೂಯ ಭಾರದ್ವಾಜ್, ಲಕ್ಷ್ಮೀ ರೈ, ಶ್ರೀಗೋಪಿಕಾ.. ಮೊದಲಾದವರು ನಟಿಸಿದ್ದಾರೆ. ವೂಲ್ಫ್ ಮಾರ್ಚ್‍ನಲ್ಲಿ ತೆರೆ ಕಾಣಲಿದೆ.
ವಸಿಷ್ಠ ಸಿಂಹ ಲವ್ ಲೀ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಕೇಶವ್ ಪ್ರಸಾದ್ ನಿರ್ದೇಶನದ ಲವ್ ಲೀ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದರ ಜೊತೆಯಲ್ಲೇ ಜನವರಿ 26ಕ್ಕೆ ಹರಿಪ್ರಿಯಾ ಅವರ ಜೊತೆ ಹಸೆಮಣೆ ಏರಲಿದ್ದಾರೆ. ಒಟ್ಟಿನಲ್ಲಿ ವಸಿಷ್ಠ ಸಿಂಹ ಅವರಿಗೆ ಶುಭಕಾಲ ಶುರುವಾಗಿದೆ.