ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ, ಪೂಜಾ ಹೆಗ್ಡೆ ಮಾದರಿಯಲ್ಲೇ ಸದ್ದು ಮಾಡ್ತಿರೋ ಕನ್ನಡತಿ ಶ್ರೀಲೀಲಾ. ತೆಲುಗಿನಲ್ಲಿ. ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಕಿಸ್ ಖ್ಯಾತಿಯ ಶ್ರೀಲೀಲಾ, ತೆಲುಗಿನ ಲೆಜೆಂಡ್ ರಾಘವೇಂದ್ರ ರಾವ್ ಕಣ್ಣಿಗೆ ಬಿದ್ದರು. ಸೌಂದರ್ಯ ಮತ್ತು ನಟನೆ ಎರಡೂ ಇದ್ದ ಶ್ರೀಲೀಲಾ ಸಾಲು ಸಾಲು ಚಿತ್ರಗಳಿಗೆ ಯೆಸ್ ಎಂದರು. ಹೊಸಬರ ಚಿತ್ರಗಳಷ್ಟೇ ಅಲ್ಲದೆ ರವಿತೇಜ, ನಿತಿನ್, ರಾಮ್ ಪೊತಿನೇನಿ ಹಾಗೂ ಬಾಲಕೃಷ್ಣ ಸೇರಿದಂತೆ ಎಲ್ಲ ವಯೋಮಾನದ ಹೀರೋಗಳಿಗೂ ಜೊತೆಯಾದ ಶ್ರೀಲೀಲಾ ಈಗ ಬಂಪರ್ ಪ್ರೈಜ್`ನ್ನೇ ಪಡೆದಿದ್ದಾರೆ. ಮಹೇಶ್ ಬಾಬು ಎದುರು ಹೀರೋಯಿನ್ ಆಗುತ್ತಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ಹೀರೋ. ಚಿತ್ರದಲ್ಲಿ ಶ್ರೀಲೀಲಾ ಜೊತೆ ಪೂಜಾ ಹೆಗ್ಡೆ ಕೂಡಾ ನಾಯಕಿ. ಮೊದಲ ಹೀರೋಯಿನ್, ಸೆಕೆಂಡ್ ಹೀರೋಯಿನ್ ಎಂದೆಲ್ಲ ಏನಿಲ್ಲ. ಇಬ್ಬರೂ ನಾಯಕಿಯರು. ಇಬ್ಬರಿಗೂ ಅಷ್ಟೇ ಪ್ರಧಾನವಾದ ರೋಲ್ ಇದೆ ಎನ್ನುತ್ತಿದೆ ಚಿತ್ರತಂಡ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ನಾನು ಇದುವರೆಗೆ ನಟಿಸಿರುವ ಎಲ್ಲ ಪಾತ್ರಗಳಲ್ಲೂ ವೆರೈಟಿ ಇದೆ. ಒಂದೊಂದು ಪಾತ್ರವೂ ನನ್ನ ಹಿಂದಿನ ಚಿತ್ರಗಳಿಗಿಂತ ಡಿಫರೆಂಟ್ ಎಂದಿದ್ದಾರೆ ಶ್ರೀಲೀಲಾ.
ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದಲ್ಲಿ ನಾಯಕಿಯರನ್ನು ಚೆಂದವಾಗಿ ತೋರಿಸುವುದಷ್ಟೇ ಅಲ್ಲ, ವಿಭಿನ್ನವಾಗಿ ತೋರಿಸುವುದರಲ್ಲಿ ಹೆಸರುವಾಸಿ. ಒಂದೊಂದು ಪಾತ್ರಕ್ಕೂ ಒಂದೊಂದು ಮ್ಯಾನರಿಸಂ ಕೊಡುವ ತ್ರಿವಿಕ್ರಮ್ ಶ್ರೀನಿವಾಸ್ ಆ ಇಮೇಜ್‍ನ್ನು ಪ್ರೇಕ್ಷಕರು ಸದಾ ನೆನಪಿಟ್ಟುಕೊಳ್ಳುವಂತೆ ಮಾಡಬಲ್ಲರು. ಜೊತೆಗೆ ಶ್ರೀಲೀಲಾಗೆ ಈಗಿನ್ನೂ ತೆಲುಗಿನಲ್ಲಿ ಧಮಾಕಾ ಅನ್ನೋ 100 ಕೋಟಿ ಚಿತ್ರ ಕೊಟ್ಟು ಸಕ್ಸಸ್ ಕುದುರೆಯೇರಿದ್ದಾರೆ. ಇದೀಗ ಮಹೇಶ್ ಬಾಬು ಚಿತ್ರವೂ ಸಿಕ್ಕಿದೆ.