` ಕಮಲ್-ವಿಜಯ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಮಲ್-ವಿಜಯ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ
Vijay, Rakshit Shetty Image

ಕಮಲ್ ಹಾಸನ್. ಭಾರತ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಅವರ ಚಿತ್ರದಲ್ಲಿ ಒಮ್ಮೆ ನಟಿಸುವುದೇ ಗ್ರೇಟ್ ಎನ್ನುವವರು ಹೆಚ್ಚು. ಈಗ ಆ ಕಮಲ್ ಹಾಸನ್ ಚಿತ್ರದಲ್ಲಿ ಕನ್ನಡಿಗ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಕೇವಲ ಕಮಲ್ ಹಾಸನ್ ಅಲ್ಲ, ತಮಿಳಿನ ಇನ್ನೊಬ್ಬ ಸೂಪರ್ ಸ್ಟಾರ್ ನಟ ಎನಿಸಿಕೊಂಡಿರೋ ವಿಜಯ್ ಕೂಡಾ ನಟಿಸುತ್ತಿದ್ದಾರೆ. ಮೂವರೂ ನಟಿಸುತ್ತಿರುವ ಚಿತ್ರದ ಕಥೆ ಏನು..? ಅದೇ ಕುತೂಹಲ.

ಇತ್ತೀಚೆಗೆ ತಾನೇ ಕಮಲ್ ಹಾಸನ್, ವಿಕ್ರಂ ಚಿತ್ರದ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದರು. ಆ ಚಿತ್ರದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್, ವಿಕ್ರಂ ನಟಿಸಿದ್ದರು. ಈಗ ಹೊಸ ಚಿತ್ರದಲ್ಲಿ ವಿಜಯ್, ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರೋ ಸ್ಟಾರ್ಸ್ ಸಂಖ್ಯೆಯೇ ದೊಡ್ಡದು.

ವಿಜಯ್ ಹೀರೋ ಆಗಿದ್ದರೆ, ಕಾರ್ತಿ ಕೂಡಾ ನಟಿಸುತ್ತಾರೆ. ಕಮಲ್ ಹಾಸನ್ ಇರುತ್ತಾರೆ. ಬಾಲಿವುಡ್‍ನಿಂದ ಸಂಜಯ್ ದತ್ ಜೊತೆಯಾಗಲಿದ್ದಾರೆ. ತ್ರಿಶಾ ಕೂಡಾ ಲೀಡ್ ರೋಲ್`ನಲ್ಲಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿರುವುದು ಲೋಕೇಶ್ ಕನಗರಾಜ್. ವಿಕ್ರಂ ಹಾಗೂ ಖೈತಿ ಚಿತ್ರಗಳ ಮೂಲಕ ಹೊಸದೊಂದು ಅಲೆಯೆಬ್ಬಿಸಿರುವ ಲೋಕೇಶ್, ಈ ಚಿತ್ರದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಹೊರಟಿದ್ದಾರೆ.