ಅಪೂರ್ವ. ಈ ನಾಯಕಿಯನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಹಾಗೂ ಇವರಿಗೆ ಅಪೂರ್ವ ಎಂಬ ಅಪೂರ್ವವಾದ ಹೆಸರಿಟ್ಟವರು ರವಿಚಂದ್ರನ್. ಅಪೂರ್ವ ಅನ್ನೋ ಚಿತ್ರದ ಮೂಲಕವೇ ಬೆಳ್ಳಿತೆರೆಗೆ ಬಂದ, ರವಿಚಂದ್ರನ್ ಅವರ ನಿರ್ದೇಶನದ ಮೂಲಕವೇ ಚಿತ್ರರಂಗ ಪ್ರವೇಶಿಸಿದ ಅಪೂರ್ವ, ಮೊದಲ ಚಿತ್ರದಲ್ಲೇ ತಮ್ಮದೇ ಹೆಸರಿನ ಚಿತ್ರಕ್ಕೆ ಹೀರೋಯಿನ್ ಆಗಿ ಅಪೂರ್ವ ದಾಖಲೆ ಮಾಡಿದವರು. ಈಗ ಮತ್ತೊಮ್ಮೆ ರವಿಚಂದ್ರನ್ ಜೊತೆಯಾಗುತ್ತಿದ್ದಾರೆ.
ಅನೀಸ್ ಎಂಬುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿ ಎಂದು ಟೈಟಲ್ ಇಡಲಾಗಿತ್ತು. ಬರ್ಖಾ ಸೇನ್ ಗುಪ್ತ ಎಂಬ ನಟಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಬಂದಿದ್ದರು. ಈಗ ಚಿತ್ರದ ಟೈಟಲ್ ಮತ್ತು ಹೀರೋಯಿನ್ ಎರಡನ್ನೂ ಚೇಂಜ್ ಮಾಡಿರುವ ಅನೀಸ್ ಅಪೂರ್ವ ಅವರನ್ನು ನಾಯಕಿ ಪಟ್ಟಕ್ಕೇರಿಸಿದ್ದಾರೆ. ಚಿತ್ರದ ಹೆಸರೀಗ ಗೌರಿಯಲ್ಲ, ಗೌರಿಶಂಕರ.
ಚಿತ್ರದಲ್ಲಿ ಕ್ಯಾಡಬೊಮ್ ಹೇಡರ್ ಅನ್ನೋ ನಾಯಿ ಕೂಡಾ ಪ್ರಧಾನ ಪಾತ್ರ ವಹಿಸಲಿದೆ. ಶೀಘ್ರದಲ್ಲೇ ಶೂಟಿಂಗ್ ಕೂಡಾ ಶುರುವಾಗಲಿದೆ