` ಐವರು ಡೈರೆಕ್ಟರ್ಸ್.. ಐದು ಕಥೆ.. ಪೆಂಟಗನ್ ಸ್ಪೆಷಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಐವರು ಡೈರೆಕ್ಟರ್ಸ್.. ಐದು ಕಥೆ.. ಪೆಂಟಗನ್ ಸ್ಪೆಷಲ್
Pentagon Movie Image

ಒಂದು ಚಿತ್ರಕ್ಕೆ ಒಬ್ಬರೇ ಡೈರೆಕ್ಟರ್ ಇರುತ್ತಾರೆ. ಒಂದು ಕಥೆ ಇರುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಷಯವೇ. ಅಲ್ಲೊಂದು ಇಲ್ಲೊಂದು ವಿಭಿನ್ನ ಪ್ರಯೋಗಗಳು ನಡೆದರೂ.. ಅದು ಅಪರೂಪ. ಎಲ್ಲೋ ದೊರೈ-ಭಗವಾನ್ ತರದವರು ಜೋಡಿ ನಿರ್ದೇಶಕರಾಗಿ ಹೆಸರು ಮಾಡಿದ್ದುಂಟು. ಆದರೆ ಪೆಂಟಗನ್ ಚಿತ್ರದಲ್ಲಿ ಅದನ್ನೂ ಮೀರಿ ಐವರು ನಿರ್ದೇಶಕರು ಮತ್ತು ಐದು ಕಥೆಗಳ ಚಿತ್ರ ಮಾಡಿದ್ಧಾರೆ. ರಿಷಬ್ ಶೆಟ್ಟಿಯವರ ಕಥಾ ಸಂಗಮ ನೆನಪಿಗೆ ಬಂತೇ. ಆದರೆ ಇದು ಅದಕ್ಕಿಂತ ವಿಭಿನ್ನ.

ಖ್ಯಾತ ನಿರ್ದೇಶಕ ಗುರು ದೇಶಪಾಂಡೆ

ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ

ಬ್ರಹ್ಮಚಾರಿ ಖ್ಯಾತಿಯ ಚಂದ್ರ ಮೋಹನ್

ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಹಾಗೂ

ಹೊಸ ಪ್ರತಿಭೆ ಕಿರಣ್ ಕುಮಾರ್ ತಲಾ ಒಂದೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಹೊಸ ಪ್ರಯೋಗದ ಮೂಲ ಗುರು ದೇಶಪಾಂಡೆಯವರೇ. ಜಿ ಸಿನಿಮಾಸ್ ಮೂಲಕ ಬರುತ್ತಿರುವ ಚಿತ್ರದಲ್ಲಿ  ಸ್ವತಃ ಅವರ ನಿರ್ದೇಶನದ ಕನ್ನಡದ ಕಥೆಯಿದೆ.

ಕಿಶೋರ್ ಕುಮಾರ್ ಕನ್ನಡ ಹೋರಾಟಗಾರನಾಗಿ ನಟಿಸಿರುವ ಚಿತ್ರದಲ್ಲಿ ಪೃಥ್ವಿ ಅಂಬಾರ್, ರೂಪೇಶ್ ರಾಜಣ್ಣ, ಅಶ್ವಿನಿ ಗೌಡ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರ ಹೇಗಿರಲಿದೆ.. ಜನವರಿ 18ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.