ಹೊಂಬಾಳೆಯವರ ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಹೊಂಬಾಳೆಯವರ ಹಲವು ಚಿತ್ರಗಳು ವಿವಿಧ ಹಂತಗಳಲ್ಲಿವೆ. ಇದೀಗ ಪವನ್ ಕುಮಾರ್ ನಿರ್ದೇಶನದ ಧೂಮಂ ಚಿತ್ರ ಚಿತ್ರೀಕರಣ ಮುಗಿಸಿದೆ. ಧೂಮಂ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಹೀರೋ. ತಮಿಳಿನ ಸ್ಟಾರ್ ನಟಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ಕಲಾವಿದೆ ಅಪರ್ಣಾ ಬಾಲಮುರಳಿ ನಾಯಕಿ.
ಅಕ್ಟೋಬರ್ 9, 2022ರಂದು ಶುರುವಾಗಿದ್ದ ಸಿನಿಮಾ ಇದೀಗ ಚಿತ್ರೀಕರಣ ಮುಗಿಸಿದೆ. ಲೂಸಿಯಾ, ಯು-ಟರ್ನ್ ಚಿತ್ರಗಳ ಮೂಲಕ ನಾನು ವಿಭಿನ್ನ ಎಂಬ ಮೆಸೇಜ್ ಕೊಟ್ಟಿರೋ ಪವನ್ ಕುಮಾರ್ ಅವರ ಧೂಮಂ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ.
ಸದ್ಯಕ್ಕೆ ಹೊಂಬಾಳೆಯವರ ಮಡಿಲಲ್ಲಿ ಸಲಾರ್, ಬಘೀರ, ಟೈಸನ್, ರಿಚರ್ಡ್ ಆಂಟನಿ ಚಿತ್ರಗಳಿವೆ. ಪ್ರಭಾಸ್, ಶ್ರೀಮುರಳಿ, ಪೃಥ್ವಿರಾಜ್ ಸುಕುಮಾರನ್, ರಕ್ಷಿತ್ ಶೆಟ್ಟಿ, ಸೂರ್ಯ, ಕೀರ್ತಿ ಸುರೇಶ್ ಹಾಗೂ ಯುವ ರಾಜಕುಮಾರ್ ಚಿತ್ರಗಳು ಲಿಸ್ಟಿನಲ್ಲಿವೆ. ಜಗ್ಗೇಶ್-ಸಂತೋಷ್ ಆನಂದರಾಮ್ ಜೋಡಿಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಡೇಟ್ ಘೋಷಿಸಿ, ಆನಂತರ ಮುಂದಕ್ಕೆ ಹೋಗಿತ್ತು. ಆ ಚಿತ್ರದ ಅಪ್ ಡೇಟ್ ಏನಾಯ್ತು ಎಂಬುದು ಗೊತ್ತಿಲ್ಲ. ಉಳಿದಂತೆ ಹೊಂಬಾಳೆ ರೇಸ್ ಭರ್ಜರಿಯಾಗಿಯೇ ಇದೆ.