ಯೋಗರಾಜ್ ಭಟ್ ಮತ್ತು ಸಚಿವ ಬಿ.ಸಿ.ಪಾಟೀಲ್ ಕಾಂಬಿನೇಷನ್ನಿನ ಸಿನಿಮಾ ಗರಡಿ. ಪೈಲ್ವಾನರು ಮತ್ತು ಗರಡಿ ಮನೆಯ ಕಥೆ ಹೇಳೋಕೆ ಹೊರಟಿದ್ದಾರೆ ಯೋಗರಾಜ್ ಭಟ್. ಚಿತ್ರಕ್ಕೆ ಬಿ.ಸಿ.ಪಾಟೀಲ್ ಪತ್ನಿ ವಜನಾ ಪಾಟೀಲ್ ಮತ್ತು ಮಗಳು ಸೃಷ್ಟಿ ಪಾಟೀಲ್ ನಿರ್ಮಾಣವಿದೆ. ಯಶಸ್ ಸೂರ್ಯ, ಸೋನಲ್ ಮಂಥೆರೋ ನಾಯಕ ನಾಯಕಿಯಾಗಿ ನಟಿಸಿದ್ದು, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಯಶಸ್ ಸೂರ್ಯ ಚಿತ್ರದಲ್ಲಿ ಪೈಲ್ವಾನ್ ಆಗಿ ಕಾಣಿಸಿಕೊಂಡಿದ್ದು, ಅವರ ಗುರುವಾಗಿ ಬಿ.ಸಿ.ಪಾಟೀಲ್ ನಟಿಸಿದ್ದಾರೆ. ದೇಸೀ ಕ್ರೀಡೆ, ದೇಸೀ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಬೆಂಬಲಿಸಿ ಎಂದಿದ್ದಾರೆ ಯೋಗರಾಜ್ ಭಟ್. ಚಿತ್ರದಲ್ಲಿ ಮಂತ್ರಿಯಾಗಿರುವ ಬಿ.ಸಿ.ಪಾಟೀಲ್ ಒಬ್ಬರೇ ಅಲ್ಲ, ಇನ್ನೂ ಕೆಲವು ರಾಜಕಾರಣಿಗಳು ನಟಿಸಿದ್ದಾರೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಇಲ್ಲಿ ನಾಯಕ ಯಶಸ್ ಸೂರ್ಯ ತಂದೆಯಾಗಿದ್ದರೆ, ಸಚಿವ ಎಸ್.ಟಿ.ಸೋಮಶೇಖರ್ ಕೂಡಾ ಪೈಲ್ವಾನ್ ಗುರುವಾಗಿ ನಟಿಸಿದ್ದಾರೆ.
ಚಿತ್ರದ ಆಡಿಯೋ ಹಕ್ಕುಗಳನ್ನು ಸರಿಗಮಪ ಸಂಸ್ಥೆ ಖರೀದಿಸಿದೆ. 1 ಕೋಟಿಗೆ ಬಿಸಿನೆಸ್ ಆಗಿದೆ. ಇದು ನಮ್ಮ ಸಂಸ್ಥೆಯ 16ನೇ ಸಿನಿಮಾ ಎಂಬ ಖುಷಿಯಲ್ಲಿದ್ದಾರೆ ಬಿ.ಸಿ.ಪಾಟೀಲ್.