` ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ
Kabza Movie Image

ಐಎಂಡಿಬಿ ರೇಟಿಂಗ್‍ನಲ್ಲಿ ಕಳೆದ ವರ್ಷ ಟಾಪ್ 10ನಲ್ಲಿ ಕನ್ನಡದ್ದೇ ಮೂರು ಚಿತ್ರಗಳಿದ್ದವು. ಕೆಜಿಎಫ್, ಕಾಂತಾರ  ಹಾಗೂ 777 ಚಾರ್ಲಿ ಚಿತ್ರಗಳು ಐಎಂಡಿಬಿ ಟಾಪ್ ರೇಟಿಂಗ್‍ನಲ್ಲಿದ್ದವು. ಐಎಂಡಿಬಿ ಈ ವರ್ಷದ ಟಾಪ್ ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಲಿಸ್ಟಿನಲ್ಲಿ ಸ್ಥಾನ ಪಡೆದಿರುವ ಚಿತ್ರಗಳಲ್ಲಿ ಕನ್ನಡದ್ದು ಎಂದು ಇರುವುದು ಒಂದೇ ಒಂದು ಸಿನಿಮಾ.

ಮೊದಲ ಸ್ಥಾನದಲ್ಲಿರೋದು ಇದೇ ತಿಂಗಳು ರಿಲೀಸ್ ಆಗುತ್ತಿರುವ ಶಾರೂಕ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್.

2ನೇ ಸ್ಥಾನದಲ್ಲಿ ತೆಲುಗಿನ ಚಿತ್ರ ಪುಷ್ಪ 2 ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ.

3ನೇ ಸ್ಥಾನದಲ್ಲಿ ಜವಾನ್, 4ನೇ ಸ್ಥಾನದಲ್ಲಿ ಆದಿಪುರುಷ್ ಇದ್ದರೆ, 5ನೇ ಸ್ಥಾನದಲ್ಲಿ ಪ್ರಶಾಂತ್ ನೀಲ್-ಪ್ರಭಾಸ್-ಹೊಂಬಾಳೆ ಜೋಡಿಯ ಸಲಾರ್ ಇದೆ. ಇದೇ ವಾರ ರಿಲೀಸ್ ಆಗುತ್ತಿರುವ ವಾರಿಸು, ದಳಪತಿ 67, ದಿ ಆರ್ಚಿಸ್, ಡಂಕಿ, ಟೈಗರ್ 3, ಕಿಸಿ ಕಾ ಭಾಯ್ ಕಿಸೀ ಕಾ ಜಾನ್, ಅನಿಮಲ್ ಏಜೆಂಟ್, ಇಂಡಿಯನ್ 2, ಶೆಹಜಾದೆ, ಬಡೇ ಮಿಯಾ ಚೋಟೇ ಮಿಯಾ ಹಾಗೂ ಭೋಲಾ ಚಿತ್ರಗಳಿವೆ.

ಈ ಲಿಸ್ಟಿನಲ್ಲಿ 7ನೇ ಸ್ಥಾನದಲ್ಲಿರೋ ಚಿತ್ರ ಆರ್.ಚಂದ್ರು ನಿರ್ದೇಶನದ ಉಪೇಂದ್ರ-ಸುದೀಪ್ ಕಾಂಬಿನೇಷನ್ನಿನ ಕಬ್ಜ.

ಲಿಸ್ಟಿನಲ್ಲಿ ಶಾರೂಕ್`ರ 3 ಸಿನಿಮಾ ಪಠಾಣ್, ಜವಾನ್ ಮತ್ತು ಡಂಕಿ ಹಾಗೂ ಶಾರೂಕ್ ಮಗಳು ಸುಹಾನಾ ಖಾನ್ ನಟಿಸಿರುವ ದಿ ಆರ್ಚಿಸ್ ಚಿತ್ರಗಳಿವೆ. ಸಲ್ಮಾನ್ ಖಾನ್`ರ 2 ಚಿತ್ರಗಳಿವೆ. ಕಾರ್ತಿಕ್ ಆರ್ಯನ್`ರ ಶೆಹಜಾದೆ, ತೆಲುಗಿನ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್. ಭೋಲಾ ಚಿತ್ರಕ್ಕೆ ಅಜಯ್ ದೇವಗನ್ ಹೀರೋ. ಅದು ತಮಿಳಿನ ಖೈದಿ ಚಿತ್ರದ ರೀಮೇಕ್.

ಕಳೆದ ವರ್ಷವೂ ಕೂಡಾ ಕನ್ನಡದ ಚಿತ್ರಗಳು ಲಿಸ್ಟಿನಲ್ಲಿರಲಿಲ್ಲ. ಕೆಜಿಎಫ್ ಹಾಗೂ ಆರ್.ಆರ್.ಆರ್. ಬಿಟ್ಟರೆ ದಕ್ಷಿಣದ ಚಿತ್ರಗಳನ್ನು ಲಿಸ್ಟಿನಲ್ಲೇ ಇಟ್ಟಿರಲಿಲ್ಲ ಐಎಂಡಿಬಿ. ಬಾಲಿವುಡ್ ಚಿತ್ರಗಳೇ ಮೇಲುಗೈ ಸಾಧಿಸಿದ್ದವು. ವರ್ಷದ ಕೊನೆಗೆ ಐಎಂಡಿಬಿ ಲಿಸ್ಟಿನಲ್ಲಿಯೂ ಇದ್ದು, ಪ್ರೇಕ್ಷಕರನ್ನೂ ಆಕರ್ಷಿಸಿದ ಚಿತ್ರಗಳು ಕೆಜಿಎಫ್ ಮತ್ತು ಆರ್.ಆರ್.ಆರ್. ಮಾತ್ರ. ಈ  ವರ್ಷವೂ ದಕ್ಷಿಣದ ಚಿತ್ರಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗದ್ದು.