` ರಜನಿ ಚಿತ್ರಕ್ಕೆ ಶಿವಣ್ಣ ನಂತರ ಇನ್ನೊಬ್ಬ ಸೂಪರ್ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಜನಿ ಚಿತ್ರಕ್ಕೆ ಶಿವಣ್ಣ ನಂತರ ಇನ್ನೊಬ್ಬ ಸೂಪರ್ ಸ್ಟಾರ್
Mohanlal Look from Jailer Released

ರಜನಿಕಾಂತ್ ಅಂದ್ರೇನೇ ಕ್ರೇಜ್. ಕ್ರೇಜಿಗೆ ತಕ್ಕಂತೆಯೇ ಸಿನಿಮಾ ಮಾಡೋ ರಜನಿಕಾಂತ್ ಇದೀಗ ಜೈಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಈಗಾಗಲೇ ರಮ್ಯ ಕೃಷ್ಣ, ಯೋಗಿ ಬಾಬು, ವಿನಾಯಕನ್ ರವಿ, ವಸಂತನ್ ಮೊದಲಾದವರು ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೀಗ ಇನ್ನೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್ ಎಂಟ್ರಿ ಕೊಟ್ಟಿದ್ದಾರೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರವಿದು.ಕೋಲಮಾವು ಕೋಕಿಲ, ಡಾಕ್ಟರ್, ಬೀಸ್ಟ್‍ನಂತ ಹಿಟ್ ಚಿತ್ರಗಳನ್ನು ಕೊಟಟ ನೆಲ್ಸನ್ ದಿಲೀಪ್ ಕುಮಾರ್ ಇದೇ ಮೊದಲ ಬಾರಿಗೆ ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದಿಂದ ಶಿವಣ್ಣ, ಮಲಯಾಳಂನಲ್ಲಿ ಮೋಹನ್ ಲಾಲ್ ಕೂಡಾ ನಟಿಸುತ್ತಿರುವ ಚಿತ್ರದಲ್ಲಿ ಕಥೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಮೂಲಗಳ ಪ್ರಕಾರ ಮೋಹನ್ ಲಾಲ್ ಅವರದ್ದು ಅತಿಥಿ ನಟನ ಪಾತ್ರ. ಪುಟ್ಟ ದೃಶ್ಯದಲ್ಲಿ ಬಂದು ಹೋಗುವ ದೃಶ್ಯಕ್ಕೆ 2 ದಿನದ ಕಾಲ್ ಶೀಟ್ ನೀಡಿದ್ದ ಮೋಹನ್ ಲಾಲ್, ಈಗಾಗಲೇ ಚಿತ್ರೀಕರಣ ಮುಗಿಸಿದ್ಧಾರೆ. ಆದರೆ ಶಿವಣ್ಣ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ 60ನೇ ವಯಸ್ಸಿನಲ್ಲಿ ಶಿವ ರಾಜ್ ಕುಮಾರ್ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.