ಪಾದರಾಯ. ಜಾಕ್ ಮಂಜು ನಿರ್ಮಾಣದ ಚಿತ್ರವಿದು. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಡೈರೆಕ್ಟರ್ ನಾಗಶೇಖರ್ ಹೀರೋ ಎಂಬುದು ಗೊತ್ತಿರುವ ವಿಷಯವೇ. ಆ ಚಿತ್ರದ ಮೂಲಕವೇ ನಾಯಕಿಯಾಗಿ ಮಂಗ್ಲಿ ಎಂಟ್ರಿ ಕೊಡುತ್ತಿದ್ದಾರೆ.
ಅಂಜನಾದ್ರಿ ಬೆಟ್ಟದ ಸುತ್ತ ನಡೆದಿದ್ದ ಸತ್ಯ ಘಟನೆ ಆಧಾರಿತ ಚಿತ್ರ ಇದು. ಈ ಚಿತ್ರಕ್ಕಾಗಿ ನಾಗಶೇಖರ್ ಈಗಾಗಲೇ ಹನುಮಮಾಲೆ ಧರಿಸಿ ಅಂಜನಾದ್ರಿಯಲ್ಲೇ ವ್ರತದಲ್ಲಿದ್ದಾರೆ. ಹನುಮಮಾಲೆ ಧರಿಸಿರುವ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತದಲ್ಲಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಸಣ್ಣ ಸಣ್ಣ ಪಾತ್ರಗಳಲ್ಲಿ, ಆಲ್ಬಂ ಸಾಂಗುಗಳಲ್ಲಿ ನಟಿಸಿರುವ ಮಂಗ್ಲಿ ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದಾರೆ.
ತೆಲುಗಿನಲ್ಲಿ ರಾಮುಲೋ ರಾಮುಲಾ, ಸರಂಗಾ ದರಿಯಾ, ಊ ಅಂಟಾವಾ ಮಾವ ಊಹೂ ಅಂಟಾವಾ ಹಾಡುಗಳು ಹಾಗೂ ಕನ್ನಡದಲ್ಲಿ ಕಣ್ಣೂ ಹೊಡಿಯಾಕ, ಯೆಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ, ರಾ ರಾ ರಕ್ಕಮ್ಮ, ಯಟ್ಟ ಸಟ್ಟಾ, ರಾಮ ರಾಮ ರಾಮ, ಗಿಲಕ್ಕೋ ಶಿವ ಗಿಲಕ್ಕೋ.. ಹಾಡುಗಳು ಸಂಚಲನ ಸೃಷ್ಟಿಸಿವೆ. ಈಗ ನಾಯಕಿಯಾಗಿ ಪಾದರಾಯನ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ಧಾರೆ.