ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಇಬ್ಬರೂ ಈ ವರ್ಷದ ಆರಂಭಕ್ಕೆ ಪರಸ್ಪರ ಮುತ್ತು ಕೊಟ್ಟು ಹೊಸ ಜೀವನ ಆರಂಭ ಮಾಡುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದ್ದರು. ಪವಿತ್ರಾ ಮತ್ತು ನರೇಶ್ ನಡುವಿನ ಬಾಂಧವ್ಯ ಬೀದಿಗೆ ಬಂದಿದ್ದು ಕಳೆದ ವರ್ಷದ ಜುಲೈನಲ್ಲ. ಮೈಸೂರಿನ ಹೋಟೆಲ್ಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಪವಿತ್ರಾ ಮತ್ತು ನರೇಶ್ ಅವರನ್ನು ಮೀಡಿಯಾಗಳ ಮುಂದೆ ಬೆತ್ತಲು ಮಾಡಿದ್ದರು ನರೇಶ್ ಅವರ ಪತಿ ರಮ್ಯಾ. ಇಬ್ಬರ ಮಧ್ಯೆ ಅನೈತಿಕ ಸಂಬಂಧವಿದೆ. ನಮ್ಮ ಸಂಸಾರಕ್ಕೆ ಪವಿತ್ರ ಹುಳಿ ಹಿಂಡಿದ್ದಾರೆ ಎಂದು ಕೆಂಡ ಕಾರಿದ್ದರು ರಮ್ಯಾ. ನರೇಶ್ ಅವರ ಅಧಿಕೃತ ಪತ್ನಿಯ ಆರೋಪಕ್ಕೆ ಪವಿತ್ರ ಲೋಕೇಶ್ ಕೊಟ್ಟಿದ್ದ ಉತ್ತರವೇ ಬೇರೆ. ಹೌದು ಎಂದು ಕೂಡಾ ಹೇಳಿರಲಿಲ್ಲ. ಸಂಬಂಧ ಇಲ್ಲವೇ ಇಲ್ಲ ಎಂದು ನಿರಾಕರಿಸಿರಲೂ ಇಲ್ಲ. ಈಗ ಮುತ್ತಿನ ಪ್ರಕರಣ ಮತ್ತೊಮ್ಮೆ ಹಳೆದ ವಿವಾದ ನೆನಪಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ನರೇಶ್ ಪತ್ನಿ ರಮ್ಯಾ..
2022ರ ಏಪ್ರಿಲ್‍ನಲ್ಲಿ ನರೇಶ್ ಡೈವೋರ್ಸ್‍ಗೆ ಅರ್ಜಿ ಹಾಕಿಕೊಂಡಿದ್ದರು. ನನ್ನ ಗಮನಕ್ಕೇ ತಾರದೆ ಅದನ್ನು ಎಕ್ಸ್-ಪರೇಟ್ ಮೂಲಕ ಗೆಲ್ಲುವ ಸಂಚು ಹೂಡಿದ್ದರು. (ಎಕ್ಸ್-ಪರೇಟ್ ಎಂದರೆ ಕೋರ್ಟಿನಲ್ಲಿ ಪ್ರತಿವಾದಿಯ ಗಮನಕ್ಕೆ ಬಾರದಂತೆ ಕೇಸು ತಮ್ಮ ಪರ ಆಗುವಂತೆ ಮಾಡಿಕೊಳ್ಳುವುದು. ಹಾಗೆಂದು ಇದು ಕೋರ್ಟ್ ಮಾಡುವ ಪ್ರಕ್ರಿಯೆ ಅಲ್ಲ. ಪ್ರತಿವಾದಿಯ ಗಮನಕ್ಕೆ ಕೋರ್ಟ್ ಆಚರಣೆಗಳು, ನೋಟಿಸುಗಳೂ ಸೇರಿದಂತೆ ಯಾವುದೂ ತಿಳಿಯದಂತೆ ನೋಡಿಕೊಳ್ಳುವುದು. ಒಮ್ಮೆ ಆದೇಶ ಬಂದ ಮೇಲೆ ಪ್ರತಿವಾದಿ ಮೇಲ್ಮನವಿ ಅರ್ಜಿ ಹಾಕಿಕೊಳ್ಳಬಹುದೇ ಹೊರತು, ಹಳೆಯ ಆದೇಶ ಅನೂರ್ಜಿತವಾಗುವುದಿಲ್ಲ.) ಹೇಗೋ ಅದೃಷ್ಟವಶಾತ್ ಅದು ನನ್ನ ಗಮನಕ್ಕೆ ಬಂತು. ಈ ವರ್ಷದ ಮಾರ್ಚ್‍ನಲ್ಲಿ ವಿಚಾರಣೆ ಇದೆ. ಹೀಗಿರುವಾಗ ಇವರು ಈ ರೀತಿ ಮಾಡಿದ್ದಾರೆ. ನಾನು ನನ್ನ ಕುಟುಂಬ ನಿರ್ವಹಣೆಗೆ ಹಣ ಕೇಳುತ್ತಿದ್ದೇನೆ ಅಷ್ಟೆ ಎಂದಿದ್ದಾರೆ ರಮ್ಯಾ ನರೇಶ್.
ಇದು ಸಿನಿಮಾ ಪ್ರಮೋಷನ್`ಗಾಗಿ ಮಾಡಿದ ವಿಡಿಯೋ ಅಲ್ಲ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂದಿರುವ ಪವಿತ್ರಾ ಲೋಕೇಶ್ ವಿವಾದ ಹೆಚ್ಚುವಂತೆ ಮಾಡಿದ್ದಾರೆ. ಅಧಿಕೃತವಾಗಿ ಡೈವೋರ್ಸ್ ಆಗಿಲ್ಲದ ನರೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದಿರುವುದು ಕಾನೂನು ಹೋರಾಟದಲ್ಲಿ ಯಾವ ತಿರುವು ಪಡೆಯಲಿದೆಯೋ ನೋಡಬೇಕು.