ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು ಜೊತೆ ಕೆಜಿಎಫ್ 3 ಮಾಡ್ತಾರಂತೆ ಅನ್ನೋ ಸುದ್ದಿ ಬಂತು ಆಗಲಿಲ್ಲ. ಮಫ್ತಿ ನರ್ತನ್ ಜೊತೆ ಸಿನಿಮಾ ಸುದ್ದಿಯಾಯ್ತು.ತಣ್ಣಗಾಯ್ತು. ದೇಶದ ಬೇರೆ ಬೇರೆ ಪ್ರತಿಷ್ಠಿತ ಬ್ಯಾನರ್‍ಗಳ ಹೆಸರು ಕೇಳಿ ಬಂದಿದ್ದು ಹೌದಾದರೂ ಅವರೆಲ್ಲರನ್ನೂ ಬಿಟ್ಟು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಕೈಜೋಡಿಸಿದ್ದಾರೆ. ಅದನ್ನು ಕೆವಿಎನ್ ಸಂಸ್ಥೆಯ ಸುಪ್ರೀತ್ ಅಧಿಕೃತಗೊಳಿಸಿದ್ದಾರೆ.
ವೆಂಕಟ್ ಕೋಣಂಕಿ ಅವರ ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಧ್ರುವ ಸರ್ಜಾ, ಸಂಜಯ್ ದತ್, ರವಿಚಂದ್ರನ್ ಅವರ ನಟನೆಯಲ್ಲಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರ ನಿರ್ಮಾಣ ಮಾಡುತ್ತಿದೆ. ಯಶ್ ದುಬೈನಿಂದ ವಾಪಸ್ ಆದ ನಂತರ ಯಶ್ 19 ಚಿತ್ರದ ಘೋಷಣೆಯಾಗಲಿದೆ.
ಸದ್ಯಕ್ಕೆ ಯಶ್ ಅವರ 19ನೇ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಚಿತ್ರದ ಕಥೆ, ನಿರ್ದೇಶಕರು, ಶೂಟಿಂಗ್, ಟೈಟಲ್ ಎಲ್ಲವನ್ನೂ ಇನ್ನು ಮೇಲೆ ಡಿಸೈಡ್ ಮಾಡಬೇಕು ಎಂದಿದ್ದಾರೆ ಸುಪ್ರೀತ್. ಅಧಿಕೃತವಾಗಿರುವುದು ಕೆವಿಎನ್ ಬ್ಯಾನರ್ ಎಂಬುದಷ್ಟೇ. ಆದರೆ ಯಶ್ ಇತ್ತೀಚೆಗೆ ಬರೆದಿರುವ ಪತ್ರ ಹಾಗೂ ಯಶ್ ವ್ಯಕ್ತಿತ್ವ ಗೊತ್ತಿದ್ದವರಾರೂ ಯಶ್ ಇನ್ನೂ ಕಥೆ, ಡೈರೆಕ್ಟರ್ ಫೈನಲ್ ಮಾಡಿಲ್ಲ ಎಂದರೆ ನಂಬೋಕೆ ರೆಡಿ ಇಲ್ಲ. ಆದರೆ ಯಶ್`ಗೆ ವಿಷಯವನ್ನು ಯಾವಾಗ ಏನನ್ನು ಎಷ್ಟು ಹೇಳಬೇಕು ಎಂದು ಗೊತ್ತು. ಅವರು ಹೇಳೋವರೆಗೆ ವೇಯ್ಟ್ ಮಾಡಬೇಕು, ಅಷ್ಟೆ.