` ನಾಗೇಂದ್ರ ಅರಸ್ ನಿರ್ದಶಕರ ಸಂಘಕ್ಕೆ ಅಧ್ಯಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಾಗೇಂದ್ರ ಅರಸ್ ನಿರ್ದಶಕರ ಸಂಘಕ್ಕೆ ಅಧ್ಯಕ್ಷ
Nagendra Urs

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ನಾಗೇಂದ್ರ ಅರಸು ಆಯ್ಕೆಯಾಗಿದ್ದರೆ. ಸೆಪ್ಟೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಏನ್ ಆರ್ ನಂಜುಂಡೇ ಗೌಡ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಅವರ ಅಸಮರ್ಥತೆ, ನಿಷ್ರ್ಕಿಯತೆ, ಪೊಳ್ಳು ಪ್ರತಿಷ್ಠೆಯಿಂದಲೇ ಮುಂದುವರಿದಿದ್ದಲ್ಲದೆ ಸಮಿತಿಯನ್ನು ವಿಶ್ವಸಕ್ಕೆ ತೆಗೆದುಕೊಂಡು ನಾಲ್ಕು ತಿಂಗಳಲ್ಲಿ ಸಮಿತಿಯ ಸಂಪೂರ್ಣ ಬೆಂಬಲ ಸಹಕಾರವಿದ್ದೂ ಕೂಡ ಒಂದು ಪುಟಚ್ಟ ಕೆಲಸವೂ ಆಗಲಿಲ್ಲ, ಅಭಿವೃದ್ದಿ ಸಂಬಂಧ ಒಂದೇ ಒಂದು ಕಾರ್ಯಕ್ರಮವು ನಡೆಯದೆ ಚುನಾಯಿತ ಸಮಿತಿ ಸದಸ್ಯರು ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡದಂತಾದ ಪರಿಸ್ಛಿತಿ ನಿರ್ಮಾಣವಾಗಿತ್ತು. ಅಲ್ಲದೆ ಅವರು ವಾಮಮಾರ್ಗದಿಂದ ನಾಮಪತ್ರ ಸಲ್ಲಿಸಿ ಬೇರೆಯವರಿಂದ ಒತ್ತಡ ತಂದು ಅವರು ಅಧ್ಯಕ್ಷರಾಗಿದ್ದ ಯಾಕೆ ಎಂಬುದು ಸಮಿಗಿಗೆ ಅರಿವಾಗುವಾಗ ನಾಲ್ಕು ತಿಂಗಳು ಸಮೀಪಿಸಿತ್ತು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ ಪ್ರಧಾನ ಕಾರ್ಯದರ್ಶಿ ಟಿ ಶ್ರೀಧರ್.

ಜನವರಿ 4ರಂದು ನಡೆದ ವಿಶೇಷ ಕಾರ್ಯಕಾರಿ ಸಮತಿಯಲ್ಲಿ ಖ್ಯಾತ ನಟ ಸುಂದರಕೃಷ್ಣ ಅರಸು ಅವರ ಮಗ ನಾಗೇಂದ್ರ ಅರಸು  ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ತಂಡ ಜೋಸೈಮನ್ ಅವರನ್ನ ಮುಂದುವರಿಸಿದ್ದಾರೆ.

ನೂತನ ಪದಾಧಿಕಾರಿಗಳ ಪಟ್ಟಿ-

ಗೌರವಾಧ್ಯಕ್ಷರು - ಜೋಸೈಮನ್

ಅಧ್ಯಕ್ಷರು - ನಾಗೇಂದ್ರ ಅರಸ್ ಎಸ್ ಕೆ

ಉಪಾದ್ಯಕ್ಷರು ಮತ್ತು ವಕ್ತಾರರು - ಎನ್ನಾರ್ ಕೆ ವಿಶ್ವನಾಥ್

ಉಪಾಧ್ಯಕ್ಫರು - ಜಗದೀಶ್ ಕೊಪ್ಪ

ಪ್ರಧಾನ ಕಾರ್ಯಕರ್ಶಿ - ಶ್ರೀಧರ್ ಟಿ

ಜಂಟಿ ಕಾರ್ಯದರ್ಶಿ - ಮಂಜುನಾಥ್ ಎಂ (ಮಸ್ಕಲ್ ಮಟ್ಟಿ)

ಖಜಾಂಚಿ - ಮಂಜುನಾಥ್ ದೈವಜ್ಞ