2022 ಶುರುವಾದಾಗ ಭಯವಿತ್ತು. ಈಗ ಕೊನೆಯಾಗುತ್ತಿರುವಾಗಲೂ ಒಂದು ಆತಂಕವಿದೆ. ಆರಂಭ ಮತ್ತು ಅಂತ್ಯದ ಆತಂಕಕ್ಕೆ ಕಾರಣ ಎರಡೂ ಕೊರೊನಾವೇ. ಬಾಲಿವುಡ್‍ಗೆ ಸವಾಲು ಹಾಕಿದ ದಕ್ಷಿಣದ ಚಿತ್ರರಂಗಗಳೆಲ್ಲ ಭರ್ಜರಿ ಸಕ್ಸಸ್ ರುಚಿ ನೋಡಿವೆ. ತೆಲುಗಿನಲ್ಲಿ ಆರ್.ಆರ್.ಆರ್. ಪುಷ್ಪ (ಕಳೆದ ವರ್ಷ ರಿಲೀಸ್ ಆದರೂ ಸೆನ್ಸೇಷನ್ 2022ರಲ್ಲೂ ಇತ್ತು), ಮೇಜರ್, ಮಲಯಾಳಂನಲ್ಲಿ ಹೃದಯಂ, ಕಡೇವರ್, ಜನಗಣಮನ, ತಮಿಳಿನಲ್ಲಿ ವಿಕ್ರಂ, ಪೊನ್ನಿಯನ್ ಸೆಲ್ವನ್, ಲವ್ ಟುಡೇ ಚಿತ್ರಗಳು ಭಾರಿ ಗೆಲುವು ದಾಖಲಿಸಿದವು. ಕನ್ನಡದ ವಿಷಯಕ್ಕೆ ಬಂದರೆ ಈ ವರ್ಷ ಕಂಟೆಂಟ್ ಚಿತ್ರಗಳದ್ದೇ ಸದ್ದು.
ಈ ವರ್ಷ ರಿಲೀಸ್ ಆಗಿದ್ದು ಒಟ್ಟು 200+ ಸಿನಿಮಾ. ಹೂಡಿಕೆಯಾದ ಹಣದ ಮೊತ್ತ 500 ಕೋಟಿಗೂ ಹೆಚ್ಚು.
ಬ್ಲಾಕ್ ಬಸ್ಟರ್ ಚಿತ್ರಗಳು 5 : ಕೆಜಿಎಫ್ ಚಾಪ್ಟರ್ 2 (1250+ ಕೋಟಿ), ಕಾಂತಾರ (400+ಕೋಟಿ), ವಿಕ್ರಾಂತ್ ರೋಣ (200+ಕೋಟಿ), 777 ಚಾರ್ಲಿ (150+ಕೋಟಿ) ಹಾಗೂ ಜೇಮ್ಸ್ (100+ಕೋಟಿ)
ಹಿಟ್ ಸಿನಿಮಾಗಳು : ವೇದ. ಗಾಳಿಪಟ 2, ಗುರು ಶಿಷ್ಯರು, ಗಂಧದ ಗುಡಿ, ಲವ್ ಮಾಕ್ಟೇಲ್ 2
ಗಮನ ಸೆಳೆದವು : ಧರಣಿ ಮಂಡಲ ಮಧ್ಯದೊಳಗೆ, ವೀಲ್ ಚೇರ್ ರೋಮಿಯೋ, ಕಂಬ್ಳಿಹುಳ, ತೂತು ಮಡಿಕೆ, ಲವ್ 360, 10
ನಾಯಕಿಯರ ಮೋಡಿ : ಸಪ್ತಮಿಗೌಡ (ಕಾಂತಾರ), ಸಂಗೀತಾ ಶೃಂಗೇರಿ (777 ಚಾರ್ಲಿ), ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ), ನಿಶ್ವಿಕಾ ನಾಯ್ಡು (ಗುರು ಶಿಷ್ಯರು), ಆದಿತಿ ಸಾಗರ್ (ವೇದ), ಗಾನವಿ ಲಕ್ಷ್ಮಣ್ (ವೇದ)