ಮೊದಲ ಚಿತ್ರದಲ್ಲಿ ತುಸು ತಮಾಷೆಯಾಗಿ, ತುಸು ಗಂಭೀರವಾಗಿ ಬಾಂಡ್ಲಿ ತಲೆಗಳ ಸಮಸ್ಯೆಯನ್ನು ಹೇಳಿ ಗೆದ್ದು ಮೊಟ್ಟೆ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಇವತ್ತಿಗೂ ಜನ ಗುರುತಿಸೋದು ಮೊಟ್ಟೆ ಸ್ಟಾರ್ ಎಂದೇ. ಆನಂತರ ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ಇಂಡಸ್ಟ್ರಿಗೇ ಶಾಕ್ ಕೊಟ್ಟವರು ಅದೇ ರಾಜ್ ಬಿ.ಶೆಟ್ಟಿ. ಅದೊಂದು ವಿಚಿತ್ರ ವಿಕ್ಷಿಪ್ತ ಥ್ರಿಲ್ಲರ್. ಈಗ ಸೇಡಿನ ಕಥೆಯ ಮೂಲಕ ಬರುತ್ತಿದ್ದಾರೆ. ಹೌದು, ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಹನಿಯೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿದೆ.
ಆದರೆ. ಇದೂವರೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಕಥೆಯ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲಿಗೆ ಈ ಚಿತ್ರದಲ್ಲಿ ನಟಿಸೋಕೂ ಒಪ್ಪಿಕೊಂಡಿದ್ದ ರಮ್ಯಾ, ನಂತರ ನಾಯಕಿಯ ಪಟ್ಟದಿಂದ ಹಿಂದೆ ಸರಿದರು. ರಮ್ಯಾ ತಮ್ಮ ಪಾತ್ರಕ್ಕೆ ಸಿರಿ ರವಿಕುಮಾರ್ ಅವರನ್ನು ಆಯ್ಕೆ ಮಾಡಿದರು. ಸದ್ಯಕ್ಕೆ ಚಿತ್ರದ ಬಗ್ಗೆ ಹೊರಬಿದ್ದಿರೋ ಪೋಸ್ಟರ್ ಬಿಟ್ಟರೆ ಮಿಕ್ಯಾವ ಮಾಹಿತಿಗಳೂ ಲಭ್ಯವಿಲ್ಲ. ಇದರ ನಡುವೆಯೇ ಇನ್ನೊಂದು ಚಿತ್ರಕ್ಕೆ ಯೆಸ್ ಎಂದಿರೋ ರಾಜ್ ಬಿ.ಶೆಟ್ಟಿ ಸೇಡಿನ ಕಥೆಯೊಂದಕ್ಕೆ ಜೈ ಎಂದಿದ್ದಾರೆ.
ಹೊಸ ಚಿತ್ರದ ಕಥೆ ಅವರದ್ದೇ. ಡೈರೆಕ್ಟರ್ ಅವರ ಜೊತೆಯಲ್ಲೇ ಇದ್ದ ಬಾಸಿಲ್ ಅಲ್ಚಲಕ್ಕರ್. ಮೊದಲ ಚಿತ್ರದಿಂದಲೂ ರಾಜ್ ಬಿ.ಶೆಟ್ಟಿ ಜೊತೆಯಲ್ಲಿರುವ ಬಾಸಿಲ್, ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಮತ್ತೊಂದೆಡೆ ರಾಜ್, ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಅಪರ್ಣಾ ಬಾಲಮುರಳಿ ಅಬಿನಯಿಸುತ್ತಿರುವ ಹೊಸ ಚಿತ್ರ ರುಧಿರಾಮ್‍ದಲ್ಲಿ ರಾಜ್ ಬಿ.ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ.