ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದು ಹಾಡಿ ಕುಣಿಯುತ್ತಾ ಬಂದ ಚಂದನ್ ಶೆಟ್ಟಿ, ಸ್ಯಾಂಡಲ್‍ವುಡ್‍ನಲ್ಲೀಗ ಯೂತ್ ಸೆನ್ಸೇಷನ್. ಸಿಂಗರ್ ಆಗಿ, ಮ್ಯೂಸಿಕ್ ಡೈರೆಕ್ಟರ್ ಆಗಿಯೂ ಗೆದ್ದ ಚಂದನ್ ಶೆಟ್ಟಿ, ಈಗ ನಾಯಕರಾಗಿದ್ದಾರೆ. ಒಂದಲ್ಲ ಎರಡು ಸಿನಿಮಾದಲ್ಲಿ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ 2ನೇ ಸಿನಿಮಾ ಸೂತ್ರಧಾರ ಚಿತ್ರತಂಡ ಹೊಸ ವರ್ಷಕ್ಕೆಂದೇ ಹೊಸ ಹಾಡು ರಿಲೀಸ್ ಮಾಡಿದೆ. ಸಾಮಾನ್ಯವಾಗಿ ಹೊಸ ವರ್ಷಕ್ಕೊಂದು ಹೊಸ ಹಾಡು ರಿಲೀಸ್ ಮಾಡೋದು ಚಂದನ್ ಶೆಟ್ಟಿ ಸಂಪ್ರದಾಯ. ಈ ಬಾರಿ ಚಂದನ್ ಶೆಟ್ಟಿ ಅಭಿನಯದ ಚಿತ್ರತಂಡ ಹೊಸ ವರ್ಷಕ್ಕೆ ಹೊಸ ಹಾಡು ಕೊಟ್ಟಿದೆ. ಡ್ಯಾಶ್ ಸಾಂಗ್.
ಹಾಡು ಚಂದನ್ ಶೆಟ್ಟಿ ತಕ್ಕಂತೆಯೇ ಇರೋದು ಸ್ಪೆಷಲ್ಲು. ನನ್ನ ಡ್ಯಾಶ್ ಮಾಡ್ಕೊಳ್ಳೇ.. ಎಂದು ಚಂದನ್ ಶೆಟ್ಟಿ ಹಾಡೋದು..ಕೇಳೋದು.. ಎಲ್ಲ ಸಲಗ ಖ್ಯಾತಿಯ ಸಂಜನಾ ಆನಂದ್‍ಗೆ. ಡ್ಯಾಷ್ ಅಂದ್ರೆ ಏನು ಎಂದರೆ ನಿರ್ದೇಶಕರು ನೀವೇ ತುಂಬಿಕೊಳ್ಳಿ. ಡ್ಯಾಷ್ ಎಂದರೆ ಖಾಲಿ ಜಾಗ ಎನ್ನುತ್ತಾರೆ ನಿರ್ದೇಶಕ ಕಿರಣ್ ಕುಮಾರ್. ಚಿತ್ರಕ್ಕೆ ನವರಸನ್ ನಿರ್ಮಾಪಕರಾಗಿದ್ದು ಹಾಡಿಗೆ ಚಂದನ್ ಶೆಟ್ಟಿ ಹಾಗೂ ಚೇತನ್ ಕುಮಾರ್ ಜಂಟಿ ಸಾಹಿತ್ಯವಿದೆ. ಚಂದನ್ ಶೆಟ್ಟಿಯೇ ಮ್ಯೂಸಿಕ್ ನೀಡಿದ್ದಾರೆ. ಹಾಡನ್ನೂ ಅವರೇ ಹಾಡಿದ್ದಾರೆ.
ಸೂತ್ರಧಾರ ಚಿತ್ರಕ್ಕೆ ನಾಯಕಿ ಅಪೂರ್ವ. ಆದರೆ ಈ ಹಾಡಿನಲ್ಲಿ ಮಾತ್ರ ಸಂಜನಾ ಆನಂದ್ ಮೊದಲ ಬಾರಿಗೆ ಸೊಂಟ ಕುಣಿಸಿದ್ದಾರೆ. ಸ್ಪೆಷಲ್ ಸಾಂಗಿನಲ್ಲಿ ಹೆಜ್ಜೆ ಹಾಕುವುದು ನನಗೂ ಹೊಸ ಅನುಭವ. ಹಾಡು ಸಖತ್ತಾಗಿದೆ ಎಂದಿದ್ದಾರೆ ಸಂಜನಾ. ಹೊಸ ವರ್ಷಕ್ಕಾಗಿಯೇ ಬಿಡುಗಡೆ ಮಾಡಿರುವ ಹಾಡು ನೋಡುಗರಿಗೂ ಇಷ್ಟವಾಗಿದ್ದು, ಈಗಾಗಲೇ ಲಕ್ಷಾಂತರ ಜನ ಹಾಡು ನೋಡಿ ಮೆಚ್ಚಿದ್ದಾರೆ.