` ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು?
Upadhykasha Movie Image

ಅಧ್ಯಕ್ಷ ಚಿತ್ರದಲ್ಲಿ ಅಧ್ಯಕ್ಷ ಶರಣ್ ಹೇಗೆ ಫೇಮಸ್ ಆದರೋ, ಹಾಗೆಯೇ ಖ್ಯಾತಿ ಪಡೆದವರು ಉಪಾಧ್ಯಕ್ಷ ಚಿಕ್ಕಣ್ಣ. ಅದೇ ಹೆಸರಿನಲ್ಲಿ ಚಿತ್ರ ಸೆಟ್ಟೇರಿದ್ದು ಗೊತ್ತೇ ಇದೆ. ಉಮಾಪತಿಯಂದ ಸ್ಟಾರ್ ನಿರ್ಮಾಪಕರ ಚಿತ್ರವಿದು. ಅನಿಲ್ ಕುಮಾರ್ ನಿರ್ದೇಶನದ ಉಪಾಧ್ಯಕ್ಷ ಚಿತ್ರದಲ್ಲಿ ಹೊಸ ನಟಿ ಮಲೈಕಾ ಹೀರೋಯಿನ್. ಮ್ಯೂಸಿಕ್ ಡೈರೆಕ್ಷನ್ ಅರ್ಜುನ್ ಜನ್ಯ ಅವರದ್ದು.

ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕುಂಭಳಕಾಯಿ ಒಡೆಯಲಾಗಿದೆ. ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಕಾಮಿಡಿ ಮಾಡುವುದು ಕಷ್ಟ., ಹೀಗಿದ್ದರೂ ಹೊಸಬರಾದರೂ ಕಡಿಮೆ ಟೇಕ್‍ಗಳಲ್ಲಿ ಮುಗಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಚಿಕ್ಕಣ್ಣ. ಈ ಚಿತ್ರದ ಮೂಲಕ  ನಾನು ಹೀರೋ ಆಗಿ, ಮಲೈಕಾ ಹೀರೋಯಿನ್ ಆಗಿ ಹಾಗೂ ಕೊರಿಯೋಗ್ರಾಫರ್ ಆಗಿ ದರ್ಶಿನಿ ಎಂಬ ಹುಡುಗಿ ಪರಿಚಯವಾಗುತ್ತಿದ್ದೇವೆ. ಎಲ್ಲರನ್ನೂ ಹರಸಿ ಎಂದು ಮನವಿ ಮಾಡಿದರು ಚಿಕ್ಕಣ್ಣ. ತನ್ನಂತ ಒಬ್ಬ ಕಾಮಿಡಿಯನ್‍ನ್ನು ಹೀರೋ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.