ಶಿವ ರಾಜ್ ಕುಮಾರ್ ಅವರ 125ನೇ ಸಿನಿಮಾ ನಮ್ಮ ಕೈಗೆ ಬಂದಿದ್ದೇ ಒಂದು ರೋಚಕ ಕತೆ. ಮೊದಲು ಯಾರೋ ಒಬ್ಬರು ಬಂದರು. ಮುಹೂರ್ತವೂ ಆಯಿತು. ಆದರೆ ಟೇಕಾಫ್ ಆಗಲಿಲ್ಲ. ಮತ್ತೊಬ್ಬರು ಬಂದರು. ಅವರೂ ಅಷ್ಟೆ. ಕೊನೆಗೆ ನಾವೇ ಸಿನಿಮಾ ಮಾಡುತ್ತೇವೆ ಎಂದಾಗ ಅವರು ಬೇಡ ಎನ್ನಲಿಲ್ಲ. ಅದೃಷ್ಟ ಚೆನ್ನಾಗಿತ್ತು ಎಂದವರು ಗೀತಾ. ಫಸ್ಟ್ ಡೇ ಫಸ್ಟ್ ಶೋ ನೋಡಿ ಮಾತನಾಡುತ್ತಿದ್ದ ಗೀತಾಗೆ ಅಭಿಮಾನಿಗಳು ಮಡಿಲಕ್ಕಿ ತುಂಬಿದ್ದು ವಿಶೇಷವಾಗಿತ್ತು. ಇದೇ ವೇಳೆ ಮಾತನಾಡಿದ ಗೀತಾ
ಶಿವರಾಜ್ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟವಾಯಿತು. ಸಿನಿಮಾದಲ್ಲಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಶಿವರಾಜ್ಕುಮಾರ್ ಸರಿಸಮಾನಗಿ ನಟಿಸುವುದು ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್ಗೆ ಹೆದರಿಕೊಂಡಿರಲಿಲ್ಲ. ಒಳ್ಳೆಯದಾಗುತ್ತದೆ ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ ಗೀತಾ.
ಶಿವಣ್ಣ ಜೊತೆ ಗಾನವಿ ಲಕ್ಷ್ಮಣ್ ಪತ್ನಿಯಾಗಿ ನಟಿಸಿದ್ದಾರೆ. ಆದಿತಿ ಸಾಗರ್ ಶಿವಣ್ಣ ಮಗಳಾಗಿ ನಟಿಸಿದ್ದಾರೆ. ಹರ್ಷ ಕ್ರೌರ್ಯವನ್ನು ವೈಭವೀಕರಿಸಿದ್ದರೂ, ಚಿತ್ರದ ಮೆಸೇಜ್ ಅದ್ಭುತವಾಗಿದ್ದು ಕ್ರೌರ್ಯ ಓಕೆ ಎನ್ನುವಂತೆ ಪ್ರೇಕ್ಷಕರು ಮೆಚ್ಚುಗೆ ತೋರಿಸಿದ್ದಾರೆ.