ಚಂದನ್ ಶೆಟ್ಟಿ ಕನ್ನಡದ ಫೇಮಸ್ ರ್ಯಾಪ್ ಸಿಂಗರ್. ಅವರ ಆಲ್ಬಮ್ಮುಗಳಿಗೆ ಕೋಟಿ ಕೋಟಿ ವೀಕ್ಷಕರಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಆಗಿ ಚಂದನ್ ಶೆಟ್ಟಿಯವರಿಗೆ ಬೇರೆಯದೇ ಸ್ಟಾರ್ ಡಂ ಇದೆ. ಪೊಗರು ನಂತರವಂತೂ ಚಂದನ್ ಶೆಟ್ಟಿ ಬೇರೆಯದೇ ಲೆವೆಲ್ ತಲುಪಿದ್ದಾರೆ. ಆಲ್ಬಮ್ಮುಗಳಲ್ಲಿ ನಟಿಸಿ ಅನುಭವವಿರೋ ಚಂದನ್ ಶೆಟ್ಟಿ ಈಗಾಗಲೇ ಹೀರೋ ಆಗಿ ಎಲ್ರ ಕಾಲೆಳೀತದೆ ಕಾಲ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆ ಚಿತ್ರಕ್ಕೆ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶಕ. ಇದರ ನಡುವೆಯೇ ಚಂದನ್ ಶೆಟ್ಟಿ ಸೂತ್ರಧಾರನಾಗಿದ್ದಾರೆ.
ನವರಸನ್ ನಿರ್ಮಾಣದ ಸೂತ್ರಧಾರ ಚಿತ್ರದಲ್ಲಿ ಚಂದನ್ ಶೆಟ್ಟಿ ಹೀರೋ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಇದೀಗ ಚಿತ್ರತಂಡಕ್ಕೆ ನಾಯಕಿಯ ಆಯ್ಕೆಯೂ ಆಗಿದೆ. ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರದ ಹಾಡಿನ ಶೂಟಿಂಗ್ ನಡೆದಿದ್ದು, ಡಿ.27ರಂದು ಹಾಡು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಚಂದನ್ ಶೆಟ್ಟಿ ಜೊತೆ ಅಪೂರ್ವ ಕೂಡಾ ನಾಯಕಿಯಾಗಿದ್ದು, ತಬಲಾ ನಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಕಿರಣ್ ಕುಮಾರ್ ನಿರ್ದೇಶನದ ಸೂತ್ರಧಾರ ಚಿತ್ರದ ಈ ಹಾಡು ಹೊಸ ವರ್ಷದ ಸಂಭ್ರಮಕ್ಕೆಂದೇ ಬಿಡುಗಡೆಯಾಗುತ್ತಿದೆ