` ವೇದದಲ್ಲಿ ಹೆಣ್ಣು ಮಕ್ಕಳ ಪವರ್ ತೋರಿಸಿದ್ದೇವೆ : ಹರ್ಷ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ವೇದದಲ್ಲಿ ಹೆಣ್ಣು ಮಕ್ಕಳ ಪವರ್ ತೋರಿಸಿದ್ದೇವೆ : ಹರ್ಷ
Vedha Movie Image

ವೇದ ಚಿತ್ರದ ಟ್ರೇಲರ್ ನೋಡಿದವರಿಗೆ ಅಚ್ಚರಿ ಹುಟ್ಟಿಸುವುದು ಹೆಣ್ಣು ಮಕ್ಕಳ ಆರ್ಭಟ. ಶಿವಣ್ಣ ಏನೇ ಮಾಸ್ ಹೀರೋ ಇರಬಹುದು, ತಮ್ಮದೇ ನಿರ್ಮಾಣದಲ್ಲಿ ವೇದ ಚಿತ್ರದಲ್ಲಿ ತಮಗಿಂತಲೂ ಹೆಣ್ಣು ಮಕ್ಕಳ ಪಾತ್ರಗಳಿಗೆ ವಿಶೇಷ ಶಕ್ತಿ ಕೊಟ್ಟಿದ್ದಾರೆ. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ. ಆದಿತಿ ಸಾಗರ್, ವೀಣಾ ಪೊನ್ನಪ್ಪ, ಉಮಾಶ್ರೀ.. ಎಲ್ಲರ ಪಾತ್ರಗಳೂ ಟ್ರೇಲರಿನಲ್ಲೇ ವ್ಹಾವ್ ಎನ್ನಿಸುವಂತಿವೆ.

‘ಈ ಸಿನಿಮಾದಲ್ಲಿ ಹೆಣ್ಣು ಮಕ್ಕಳ ಪಾತ್ರಗಳೇ ಪ್ರಮುಖವಾಗಿವೆ. ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ ಪ್ರಮುಖ ಪಾತ್ರಗಳನ್ನು ಪೋಷಿಸಿದ್ದಾರೆ. ಗಾನವಿ ಶಿವಣ್ಣ ಅವರ ಪತ್ನಿಯಾಗಿ ಪುಷ್ಪ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೇ ಅದಿತಿ ಸಾಗರ್. ಶ್ವೇತಾ ಚೆಂಗಪ್ಪ ಪಾತ್ರವನ್ನು  ತೆರೆಯಲ್ಲಿಯೇ   ನೋಡಬೇಕು. ರಮಾ ಎನ್ನುವ ಪೊಲೀಸ್ ಪಾತ್ರದಲ್ಲಿ ವೀಣಾ ಪೊನ್ನಪ್ಪ ನಟಿಸಿದ್ದಾರೆ. ಉಮಾಶ್ರೀಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಪವರ್ ಏನು ಎಂಬುದು ಮತ್ತು ಹೇಗೆ ವಿಲನ್ ಆಗಿ ಕನ್ವರ್ಟ್ ಆಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಅಮಾಯಕರ ರೀತಿ ಇರುವಂತಹ ವ್ಯಕ್ತಿಗಳು ಹೇಗೆ ನರ ರೂಪದ ರಾಕ್ಷಸರಾಗುತ್ತಾರೆ ಎಂಬ ವಿಷಯವೂ ಇಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ಹರ್ಷ.

ಹಿಂದಿನ ಸಿನಿಮಾಗಳಲ್ಲಿರೋ ಹಾಗೆ ವಿಭಿನ್ನ ರೀತಿಯ ಗೆಟಪ್ಪುಗಳ ವಿಲನ್‍ಗಳು ಈ ಚಿತ್ರದಲ್ಲಿ ಇಲ್ಲ. ರಂಗಭೂಮಿಯ ಖ್ಯಾತ ನಿರ್ದೇಶಕರೂ ಆಗಿರುವ ನಟ ರಾಘು ಶಿವಮೊಗ್ಗ ಅವರಿಗೆ ವಿಭಿನ್ನ ಪಾತ್ರವಿದೆ. ಹಾಸ್ಯನಟ ಜಗ್ಗಪ್ಪ, ಭರತ್ ಎಲ್ಲರಿಗೂ ವಿಶೇಷ ಪಾತ್ರಗಳಿವೆ. ಪರಿಸ್ಥಿತಿ ಹೇಗೆ ಜನರನ್ನು ವಿಲನ್ ಆಗಿ ಪರಿವರ್ತಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಶಿವಣ್ಣ ಅವರ 125ನೇ ಸಿನಿಮಾ ಆಗಿರುವ ಕಾರಣ, ಕಮರ್ಷಿಯಲ್ ಅಂಶಗಳ ಜೊತೆಯಲ್ಲಿ ಸಂದೇಶವೂ ಇದೆ ಎಂದಿದ್ದಾರೆ ಹರ್ಷ.

ಚಿತ್ರದಲ್ಲಿ 60-70ರ ದಶಕದ ಕಥೆಯಿದೆ. ಶಿವಣ್ಣ ಅವರದ್ದೇ ಬ್ಯಾನರ್. ಅವರ ಬ್ಯಾನರಿನ ಮೊದಲ ಸಿನಿಮಾ. ಶಿವಣ್ಣ ಅವರ 125ನೇ ಸಿನಿಮಾ. ಹೀಗಾಗಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ. ಜನ ಮೆಚ್ಚುತ್ತಾರೆಂಬ ಭರವಸೆಯೂ ಇದೆ ಎಂದ್ದಾರೆ ಹರ್ಷ.