ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ನಂತರ ಮತ್ತಷ್ಟು ಆಕ್ಟಿವ್ ಆಗುತ್ತಿದ್ದಾರೆ. ಬಘೀರ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದ್ದು ಶೇ.40ರಷ್ಟು ಶೂಟಿಂಗ್ ಮುಗಿದಿದೆಯಂತೆ. ನಿರ್ದೇಶಕ ಡಾ.ಸೂರಿ ಸದ್ದಿಲ್ಲದೆ ಚಿತ್ರೀಕರಣ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಶಾಂತ್ ನೀಲ್ ಬರೆದಿರುವ ಕಥೆ. ಬಘೀರ ಚಿತ್ರಕ್ಕೆ ಹೊಂಬಾಳೆ ಸಿನಿಮಾ ಹಣ ಹೂಡುತ್ತಿದೆ. ಹೀಗಿರುವಾಗಲೇ ಇನ್ನಷ್ಟ ಆಕ್ಟಿವ್ ಆಗಿದ್ದಾರೆ ಶ್ರೀಮುರಳಿ.
ಬಘೀರ ನಂತರ ನಟಿಸುವ ಸಿನಿಮಾ ಬಗ್ಗೆ ಶ್ರೀಮುರಳಿ ಹೊಸ ಬ್ಯಾನರ್‍ವೊಂದರ ಜೊತೆ ಮಾತುಕತೆಯಾಗಿದೆಯಂತೆ. ಇತ್ತೀಚೆಗೆ ಹನುಮಾನ್ ಟೀಸರ್ ನೋಡಿ ಥ್ರಿಲ್ಲಾಗಿದ್ದು ಗೊತ್ತಿದೆ ತಾನೇ. ಆದಿಪುರುಷ್ ಟೀಸರ್ ಅಲ್ಲ, ಹನುಮಾನ್ ಟೀಸರ್. ಆ ಚಿತ್ರದ ಟೀಂನ ಹಾಲೇಶ್ ಕೂಗುಂಡಿ ಅವರ ಜೊತೆ ಶ್ರೀಮುರಳಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಹನುಮಾನ್ ಟೀಂನಲ್ಲಿದ್ದ ಹಾಲೇಶ್ ಕೂಗುಂಡಿಯವರಿಗೆ ಇದು ಮೊದಲ ನಿರ್ದೇಶನ. ಚಿತ್ರಕ್ಕೆ ಬ್ರಾಂಡ್ ಕಾರ್ಪೊರೇಟ್ಸ್ ಪ್ರೊಡಕ್ಷನ್ಸ್ ಪ್ರೈವೇಟ್ ಸಂಸ್ಥೆ ನಿರ್ಮಾಣದ ಹೊಣೆ ಸಿಕ್ಕಿದ್ದು, ಇದು ದಾವಣಗೆರೆಯ ಮೂಲದ ಯುವಕರ ಬ್ಯಾನರ್ ಎಂಬುದು ವಿಶೇಷ. ಹೀಗಾಗಿಯೇ ಚಿತ್ರದ ಪೋಸ್ಟರ್‍ನ್ನು ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.