ಕಾಮಿಡಿ ಮಾಡುವ ಶರಣ್ ದೆವ್ವಗಳ ಬೇಟೆಗೆ ಹುಡುಕಾಟಕ್ಕೆ ನಿಂತರೆ ಹೇಗಿರುತ್ತೆ. ಮುದ್ದು ಮುದ್ದಾದ ನಗುವಿನ ಒಡತಿ ಆದಿತಿ ಪ್ರಭುದೇವ ದೆವ್ವಗಳ ಜೊತೆ ಮಾತನಾಡುತ್ತಿದ್ದರೆ.. ಪೆದ್ದು ಪೆದ್ದು ನಗೆಯ ಮೂಲಕವೇ ನಗಿಸುವ ಚಿಕ್ಕಣ್ಣ ಕೂಡಾ ಹ್ರಾಂ..ಕ್ರೀಂ.. ಎನ್ನುತ್ತಿದ್ದರೆ.. ನಿರ್ದೇಶಕ ನವನೀತ್ ಛೂಮಂತರ್ ಎನ್ನುತ್ತಾರೆ. ಮೈತುಂಬಾ ಭಸ್ಮ..ಬೂದಿ.. ರುದ್ರಾಕ್ಷಿ.. ಮಣಿಸರ.. ತಲೆಗೆ ಕಲರ್ ಕಲರ್ ರುಮಾಲು.. ಚೈನುಗಳು.. ನೋಡೋದಕ್ಕೇ ಸಖತ್ ಆಗಿ ಕಾಣುವ ಇವರು ಘೋಸ್ಟ್ ಹಂಟರ್ಸ್. ದೆವ್ವಗಳ ಬೇಟೆಯೇ ಇವರ ಕಾಯಕ. ಸ್ವಲ್ಪ ಅಪ್‍ಡೇಟ್ ಆಗಿರುವ ಟೆಕ್ನಾಲಜಿಯೂ ಗೊತ್ತಿರೋ ಘೋಸ್ಟ್ ಹಂಟರ್ಸ್. ಇವರು ಛೂಮಂತರ್ ಎಂದರೆ ದೆವ್ವಗಳು ಪ್ರತ್ಯಕ್ಷವಾಗ್ತವೆ. ಛೂಮಂತರ್ ಎಂದರೆ ಅದೇ ಪ್ರತ್ಯಕ್ಷವಾದ ದೆವ್ವಗಳು ಓಡಿ ಹೋಗುತ್ತವೆ. ಹೀಗೆ ದೆವ್ವಗಳನ್ನೇ ಬೇಟೆಯಾಡುವ ಗ್ಯಾಂಗ್‍ನ ಲೀಡರ್ ಶರಣ್. ಆ ಗ್ಯಾಂಗ್‍ನ ನಾಯಕಿ ಅದಿತಿ ಪ್ರಭುದೇವ. ಅವರ ಜೊತೆಯಲ್ಲಿರೋ ವ್ಯಕ್ತಿ ಚಿಕ್ಕಣ್ಣ.
ಛೂಮಂತರ್ ಅನ್ನೋದು ಸಿನಿಮಾ ಹೆಸರು. ಆಕ್ಷನ್ ಕಟ್ ಹೇಳುತ್ತಿರೋದ ಕರ್ವ ಖ್ಯಾತಿಯ ನವನೀತ್. ಕರ್ವದಲ್ಲಿ ಬೇಜಾನ್ ಭಯ ಸೃಷ್ಟಿಸಿದ್ದ ನವನೀತ್ ಈ ಬಾರಿ ಘೋಸ್ಟ್ ಹಂಟರ್ ಸ್ಟೋರಿ ಕೈಗೆತ್ತಿಕೊಂಡಿದ್ದಾರೆ. ನಾವೆಲ್ಲ ಸಾಧಾರಣವಾಗಿ ಮಕ್ಕಳನ್ನು ಭಯ ಪಡಿಸಲು ಛೂಮಂತರ್ ಎಂದು ಹೇಳುತ್ತೇವೆ. ನೆಗೆಟಿವ್ ಎನರ್ಜಿಯನ್ನು ಪ್ರಮೋಟ್ ಮಾಡುವ ಪದವದು. ನಮ್ಮ ಛೂಮಂತರ್ ಸಿನಿಮಾದಲ್ಲಿ ಶರಣ್, ಆದಿತಿ ಹಾಗೂ ಚಿಕ್ಕಣ್ಣ ಮಾಡರ್ನ್ ಘೋಸ್ಟ್ ಹಂಟರುಗಳಾಗಿ ನಟಿಸಿದ್ದಾರೆ. ಈ ಘೋಸ್ಟ್ ಹಂಟರ್ ಟೆಕ್ಕಿ ಸೇವಿಗಳು. ಪ್ರೊಫೆಷನಲ್ಲಾಗಿ ಅಪ್ರೋಚ್ ಮಾಡುತ್ತಾರೆ ಎನ್ನುತ್ತಾರೆ ನವನೀತ್. ಶರಣ್, ಆದಿತಿ, ಚಿಕ್ಕಣ್ಣ ಜೊತೆ ಎನ್‍ಆರ್‍ಐ ದಂಪತಿಗಳಾಗಿ ಮೇಘನಾ ಗಾಂವ್ಕರ್ ಹಾಗೂ ಪ್ರಭು ಮುಂಡ್ಕರ್ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಈಗಾಗಲೇ ಲಂಡನ್, ಉತ್ತರಾಖಂಡ್, ಮೈಸೂರು, ಬೆಂಗಳೂರುಗಳಲ್ಲಿ ನಡೆದಿದೆಯಂತೆ.