` ಪ್ರಜಾರಾಜ್ಯ ಟೀಸರ್ ಬಿಡುಗಡೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪ್ರಜಾರಾಜ್ಯ ಟೀಸರ್ ಬಿಡುಗಡೆ
ಪ್ರಜಾರಾಜ್ಯ ಟೀಸರ್ ಬಿಡುಗಡೆ

ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ " ಪ್ರಜಾರಾಜ್ಯ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ದೇವರಾಜ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ದೇವರಾಜ್  ಚಿತ್ರದ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ.

 ಈ ಚಿತ್ರದಲ್ಲಿ ರಾಜಕೀಯ ಮುಖಂಡನ ಪಾತ್ರ ಮಾಡಿದ್ದೇನೆ.  ಈಗಿನ ರಾಜಕೀಯದ ಲೋಪದೋಷಗಳನ್ನು ತೋರಿಸಿ, ಅದಕ್ಕೆ ಪರಿಹಾರವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ.  ಟೀಸರ್ ಚೆನ್ನಾಗಿದೆ. ಇನ್ನು, ಈ ಚಿತ್ರದ ನಿರ್ಮಾಪಕರಾದ ವರದರಾಜು ಅವರು ವೈದ್ಯರಾಗಿದ್ದು, ಸಾಮಾಜಿಕ ಕಾಳಜಿಯಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ದೇವರಾಜ್ ಹಾರೈಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ನಮ್ಮ ತಾತಂದಿರ ಕಾಲದಲ್ಲಿ ಸ್ವಾತಂತ್ರ್ಯ ಬಂದ ರಜತ ಮಹೋತ್ಸವ ಆಚರಿಸಿದರು. ನಮ್ಮ ತಂದೆಯ ಕಾಲದವರು ಸುವರ್ಣ ಮಹೋತ್ಸವ ಆಚರಣೆ ಮಾಡಿದರು. ನಾವು ಈಗ ‍ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷವಾದರೂ ನಾವು ಯೋಚಿಸುವುದು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಅಂತ? ಆದರೆ ನಮಗೆ ಬೇಕಾದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಾವು ಯೋಚಿಸಿಯೇ ಇಲ್ಲ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವುದು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ಎಂದು.  ನಾವು ಅದರ ಬಗ್ಗೆ ಯೋಚಸುತ್ತಲೇ ಇಲ್ಲ. ಎಂಬ ಪ್ರಧಾನ ಅಂಶದೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ನೋಡಿ, ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು? ಎಂದು ಎಲ್ಲರೂ ತಿಳಿಯಬಹುದು ಎಂದು ನಿರ್ಮಾಪಕ ಹಾಗು ನಟ ಡಾ. ವರದರಾಜು ಚಿತ್ರದ ಕುರಿತು ಮಾಹಿತಿ ನೀಡಿದರು.

ಚಿತ್ರದಲ್ಲಿ ಐದು ಹಾಡುಗಳಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ವಿಜಯ್ ಭಾರ್ಗವ  ಬರೆದಿರುವ ಹಾಡುಗಳನ್ನು ರಿಯಲ್ ಸ್ಟಾರ್ ಉಪೇಂದ್ರ, ವಿಜಯ್ ಪ್ರಕಾಶ್ ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ದಿವ್ಯ, ಮೀಸೆ ಪ್ರಕಾಶ್, ಎಸ್ಕಾರ್ಟ್ ಶ್ರೀನಿವಾಸ್ ಶ್ರೀನಿವಾಸ್, ಚಿಕ್ಕ ಹೆಜ್ಜಾಜಿ‌ ಮಹದೇವ್, ಅಮೂಲ್ಯ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.