ಕತ್ತಲು ಬೆಳಕಿನ ಆಟದ ದೃಶ್ಯಗಳು. ಈ ಕಾಲದ್ದಂತೂ ಅಲ್ಲ. ಹೀರೋ ವಿಲನ್‍ಗಳನ್ನು ಚಚ್ಚಿ ಪುಡಿಗಟ್ಟುತ್ತಿದ್ದನ್ನು ನೋಡುತ್ತಿದ್ದವರಿಗೆ.. ಹೀರೋಯಿನ್.. ಆ ಹುಡುಗಿಯೂ ವ್ಹಾವ್ ಎನ್ನುವಂತೆ ಮಚ್ಚು ಬೀಸುತ್ತಾರೆ. ಹಾರಿ ಹಾರಿ ವಿಲನ್‍ಗಳ ಎದೆ ಬಗೆಯುತ್ತಾರೆ. ಯಾಕೆ.. ಏನು.. ಅನ್ನೋ ಸಣ್ಣದೊಂದು ಸುಳಿವು ಕೊಟ್ಟು ಕುತೂಹಲದ ಮೂಟೆಯನ್ನು ದೊಡ್ಡದು ಮಾಡೋಕೆ ಬಿಡುತ್ತಾರೆ ಹರ್ಷ. ವೇದ ಟ್ರೇಲರ್‍ನಲ್ಲಿ ಕಾಣಿಸುವ ಅತಿ ದೊಡ್ಡ ಶಕ್ತಿಯೇ ಅದು. ಎಲ್ಲವನ್ನೂ ತೋರಿಸಿದಂತೆ ಮಾಡಿ.. ಏನನ್ನೂ ತೋರಿಸದೆ ಕುತೂಹಲ ಹುಟ್ಟಿಸುವ ಪರಿ.
ಶಿವಣ್ಣ, ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ.. ಎಲ್ಲರೂ ವಂಡರ್‍ಗಳೇ. ರವಿವರ್ಮ, ವಿಕ್ರಂಮೋರ್, ಚೇತನ್ ಡಿಸೋಜಾ, ಅರ್ಜುನ್ ರಾಜ್ ಸ್ಟಂಟುಗಳು ಟ್ರೇಲರಿನಲ್ಲೇ ಉಸಿರುಗಟ್ಟಿ ನೋಡುವಂತಿವೆ. ಹೆಜ್ಜೆ ಹೆಜ್ಜೆಗೂ ವ್ಹಾವ್ ಎನ್ನಿಸುವುದು ಅರ್ಜುನ್ ಜನ್ಯ ಮ್ಯೂಸಿಕ್ಕು.
ಗೀತಾ ಶಿವರಾಜ್‍ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ. ಶಿವಣ್ಣ ಕೆರಿಯರ್‍ನ 125ನೇ ಸಿನಿಮಾ ವೇದ. ಕ್ವಾಲಿಟಿಯಲ್ಲಿ ಎಲ್ಲಿಯೂ ಕಾಂಪ್ರೊಮೈಸ್ ಇಲ್ಲದೆ ಮೂಡಿ ಬಂದಿರುವ ವೇದ ಡಿ.23ಕ್ಕೆ ರಿಲೀಸ್